ಚಿತ್ರದುರ್ಗ,ಜನವರಿ14:ಜಿಲ್ಲಾ ತೋಟದ ಉತ್ಪನ್ನಗಳ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ (ಜಿಲ್ಲಾ ಹಾಪ್‍ಕಾಮ್ಸ್) ಸರ್ಕಾರದ ಒಂದು ಅಂಗಸಂಸ್ಥೆಯಾಗಿದ್ದು, ನೇರವಾಗಿ ರೈತರಿಂದ ಖರೀದಿಸಿದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೂಕ್ತ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಸಂಘವು ನಿರ್ವಹಿಸುತ್ತಿದೆ.
ಹಾಲಿ ಚಿತ್ರದುರ್ಗ ನಗರದಲ್ಲಿ ಆಧುನಿಕ ಮಾರಾಟ ಮಳಿಗೆ-1, ಕಚೇರಿ ಆವರಣದ ಹಾಪ್‍ಕಾಮ್ಸ್ ಮಳಿಗೆ-1, ಬ್ಯಾಂಕ್ ಕಾಲೋನಿ-1 ಮಳಿಗೆ, ವಿದ್ಯಾನಗರ ಬಡಾವಣೆ-1, ತರಳಬಾಳು ನಗರ-1 ಹಾಗೂ ಸರಸ್ವತಿಪುರಂ ಬಡಾವಣೆಯಲ್ಲಿ 1 ಮಳಿಗೆಯಿದ್ದು, ಒಟ್ಟು 06 ಮಳಿಗೆಗಳು ಲಭ್ಯವಿದ್ದು, ಸಂಘದ ನಿಬಂಧನೆಗೆ ಒಳಪಟ್ಟು ಮಾರಾಟ ಮಳಿಗೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಆಸಕ್ತಿಯುಳ್ಳವರು ಜಿಲ್ಲಾ ಹಾಪ್‍ಕಾಮ್ಸ್ ಚಿತ್ರದುರ್ಗ ಎಸ್.ಪಿ ಆಫೀಸ್ ಹತ್ತಿರ, ತುರುವನೂರು ರಸ್ತೆ, ಚಿತ್ರದುರ್ಗ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಅಧ್ಯಕ್ಷರು-9448423102, ವ್ಯವಸ್ಥಾಪಕ ನಿರ್ದೇಶಕರು-9900054307 ಹಾಗೂ ಕಾರ್ಯದರ್ಶಿ-7892174640 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.