ಬೆಂಗಳೂರು: ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಹಲವು ವಿರೋಧಗಳ ನಡುವೆ ಹನ್ನೊಂದು ದಿನದ ಪಾದಯಾತ್ರೆಯನ್ನ ಐದೇ ದಿನಕ್ಕೆ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ತಮಿಳುನಾಡಿಗರಿಗಾಗಿ ಕಾಂಗ್ರೆಸ್ ನವರು ಪಾದಯಾತ್ರೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಪಾದಯಾತ್ರೆ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ನವರು ಪಾದಯಾತ್ರೆ ಮಾಡುವಾಗ ತಮಿಳುನಾಡಿನಿಂದಲೇ ಮೆಟಿರಿಯಲ್ ತರಿಸಿದ್ದಾರೆ. ಅಷ್ಟೇ ಅಲ್ಲ ಅಲ್ಲಿಂದಲೇ ಕಾರ್ಮಿಕರನ್ನು ಕರೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಮಾತು ಎತ್ತಿದ್ರೆ ಅಣ್ಣಾ ಮಲೈ ಅಣ್ಣಾ ಮಲೈ ಅಂತಾರೆ. ಬಹುಶಃ ಅವರಿಂದಲೇ ಕಾರ್ಮಿಕರನ್ನು ಕರೆಸಿರಬಹುದೇನೋ. ಕಾಂಗ್ರೆಸ್ ಪಾದಯಾತ್ರೆಗೆ ತಮಿಳುನಾಡಿನದ್ದೇ ಸ್ಪಾನ್ಸರ್ ಶಿಪ್ ಇದೆ. ಈಗ ಮೇಕೆದಾಟು ಯೋಜನೆ ಕೇಸ್ ಸುಪ್ರೀಂ ಕೋರ್ಟ್ ನಲ್ಲಿದೆ ಹೀಗೆ ಪ್ರತಿಭಟನೆ ನಡೆಸಿ, ತಮಿಳುನಾಡಿಗೆ ಅನುಕೂಲ ಮಾಡಿಕೊಡಲಿದ್ದಾರೆ. ತಮಿಳುನಾಡಿನಲ್ಲಿ ಸದ್ಯ ಡಿಎಂಕೆ ಜೊತೆ ಸೇರಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಹೀಗಾಗಿ ಅವರುಗೆ ಅನುಕೂಲ ಮಾಡಿಕೊಡಲು ಇಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.