ಸುದ್ದಿಒನ್, ಚಿತ್ರದುರ್ಗ, ನವೆಂಬರ್. 13 : ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಶ್ರೀ ಜಗದ್ಗುರು ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಇಂದಿನಿಂದ (ನವೆಂಬರ್ 12) 16ರ ವರೆಗೆ ನಡೆಯಲಿರುವ ರಾಜ್ಯಮಟ್ಟದ ವೈಭವದ ಸ್ವದೇಶೀ ಮೇಳ ನಡೆಯಲಿದೆ.
ಸ್ವದೇಶೀ ಜಾಗರಣ ಮಂಚ್ ಕರ್ನಾಟಕ ಪ್ರಾಂತ ಆಯೋಜಿಸಿರುವ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಸ್ಕಾರ ಭಾರತೀ ಸಹಯೋಗವಿರುವ ಸ್ವದೇಶೀ ಮೇಳದಲ್ಲಿ ಇಂದು (ನವೆಂಬರ್. 13, ಗುರುವಾರ) ಸಂಜೆ ಗೊರವರ ಕುಣಿತ (ಹಿರಿಯೂರು ತಾಲೂಕು ಅಡವಿ ರಾಮಜೋಗಿಹಳ್ಳಿ ತಂಡ) ಹಾಗೂ ವೀರಗಾಸೆ ಹೊಳಲ್ಕೆರೆ ತಾಲೂಕು ಗೂಳಿ ಹೊಸಹಳ್ಳಿ ತಂಡದ ವತಿಯಿಂದ ಸ್ಥಳೀಯ ಕಲಾವಿದರ ಕಲಾಪ್ರಸ್ತುತಿ ಕಾರ್ಯಕ್ರಮ ನೆರವೇರಲಿದ್ದು, ಸಂಜೆ 7 ರಿಂದ
ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಯಕ್ಷಧೃವ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಕಲಾ ಪ್ರಸ್ತುತಿ ಕಾರ್ಯಕ್ರಮ ನೆರವೇರಲಿದೆ ಎಂದು ಸಂಸ್ಕಾರ ಭಾರತೀ ಚಿತ್ರದುರ್ಗ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ರಾವ್ ಮಾಹಿತಿ ನೀಡಿದ್ದಾರೆ.






