ಚಿತ್ರದುರ್ಗ | ನಾಳೆ ಉಚಿತ ಆರೋಗ್ಯ ಶಿಬಿರ

1 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 13 : ನಗರದ ತುರುವನೂರು ರಸ್ತೆ (ವೀರ ಮದಕರಿಪುರ ಬೇಚರಕ ಗ್ರಾಮ) ಹರ್ಷ ಫಾರ್ಮ್ ನಲ್ಲಿ ನಾಳೆ (ನವೆಂಬರ್ 14 ಶುಕ್ರವಾರ) ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.

ಹೆಚ್‌ಬಿಎ1ಸಿ, ಇಸಿಜಿ, ಆರ್‌ಬಿಎಸ್ ವಿವಿಧ ತಪಾಸಣೆ ಜೊತೆಗೆ ಫಿಜಿಸಿಯನ್ ಸಂದರ್ಶನ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರಸೂತಿ ಮತ್ತು ಸ್ತ್ರೀ ರೋಗ, ಕೀಲು-ಮೂಳೆ, ಮಕ್ಕಳ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆರೋಗ್ಯ ತಪಾಸಣೆ ನಡೆಯಲಿದೆ. ಈ ಉಚಿತ ಮೆಗಾ ಆರೋಗ್ಯ ಶಿಬಿರವನ್ನು ವಿಶ್ವ ಮಧುವಮೇಹ ದಿನದ ಪ್ರಯುಕ್ತ ಕೋಟ್ಲ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ನಂ: 9902640159 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Share This Article