Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾರ್ಚ್ 04 ರಿಂದ 09 ರವರೆಗೆ 94ನೇ ಮಹಾ ಶಿವರಾತ್ರಿ ಮಹೋತ್ಸವ : ಕೆ.ಸಿ.ನಾಗರಾಜು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮಾ. 2 : 94ನೇ ಮಹಾ ಶಿವರಾತ್ರಿ ಮಹೋತ್ಸವವೂ ಮಾ. 4 ರಿಂದ 9ರವರೆಗೆ ನಗರದ ಶ್ರೀ ಕಬೀರಾನಂದಾಶ್ರಮದ ವತಿಯಿಂದ ಶ್ರೀಮಠದ ಆವರಣದಲ್ಲಿ ನಿರ್ಮಿತವಾಗಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಹಾ ಮಂಟಪದಲ್ಲಿ ನಡೆಯಲಿದ್ದು, ಇದರಲ್ಲಿ ಪ್ರತಿ ದಿನ ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ವಿಚಾರವಂತರು ಆಗಮಿಸುವುದರ ಮೂಲಕ ತಮ್ಮ ವಿಚಾರಧಾರೆಯನ್ನು ನೀಡಲಿದ್ದಾರೆ ಎಂದು 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು ತಿಳಿಸಿದರು.

ನಗರದ ಶ್ರೀಮಠದ ಆವರಣದಲ್ಲಿ ಸುದ್ದಿಗೋಷ್ಟಿಯಲ್ಲಿ 94ನೇ ಮಹಾ ಶಿವರಾತ್ರಿ ಮಹೋತ್ಸವದ ಮಾಹಿತಿಯನ್ನು ನೀಡಿದ  ಅವರು, ಮಾ.4ರ ಸಂಜೆ 6.30ಕ್ಕೆ ನಡೆಯುವ ಶಿವನಾಮ ಸಪ್ತಾಹದಲ್ಲಿ ವಿಜಯಪುರದ ಶ್ರೀ ಷಣ್ಮುಖಾರೂಢ ಮಠದ  ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಢ ಶ್ರೀಗಳು, ಹುಬ್ಬಳ್ಳಿಯ ಜಡೆ ಸಿದ್ದೇಶ್ವರ ಮಠದ ಶ್ರೀ ರಮಾನಂದ ಶ್ರೀಗಳು, ಬಾಗಲಕೋಟೆಯ ಆರಿಕೆರೆಯ ಶ್ರೀ ಕೌಧೀಶ್ವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ಸಾನಿಧ್ಯವನ್ನು ವಹಿಸಲಿದ್ದಾರೆ. ಸಭಾಮಂಟಪವನ್ನು ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವರಾದ ಡಿ.ಸುಧಾಕರ್ ಹಾಗೂ ಕಾರ್ಯಕ್ರಮವನ್ನು ಶಾಸಕರಾದ ವೀರೆಂದ್ರಕುಮಾರ್ ಉದ್ಘಾಟನೆ ಮಾಡಲಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್.ನವೀನ್, 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು, ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್, ಜಿ.ಟಿ.ಸುರೇಶ್, ಆಯುಕ್ತರಾದ ಸೋಮಶೇಖರ್, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷರಾದ ಲಕ್ಷ್ಮೀಕಾಂತರೆಡ್ಡಿ, ಬಿಜೆಪಿ ಮುಖಂಡರಾದ ಲಿಂಗಮೂರ್ತಿ, ಕಾಂಗ್ರೆಸ್ ಮುಖಂಡರಾದ ಎಂ.ಎ.ಸೇತುರಾಂ. ನಗರಸಭೆ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್, ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಅಂಜನಾ ನ್ಯತ್ಯ ಕಲಾ ಕೇಂದ್ರದ ಶ್ರೀಮತಿ ನಂದಿನಿ ಶಿವಪ್ರಕಾಶ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಶ್ರೀ ವೆಂಕಟಾದ್ರಿ ಭಜನಾ ಮಂಡಳಿಯ ಶ್ರೀಮತಿ ವರಲಕ್ಷ್ಮೀ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಾ.5 ರ ಸಂಜೆ 6.30ಕ್ಕೆ ನಡೆಯುವ ಶಿವನಾಮ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರ ಅದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದ ಶ್ರೀಗಳು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಶ್ರೀಗಳು, ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಹಾಗೂ ಬೀದರ್‌ನ ಮುಚಳಾಂಬದ ಶ್ರೀ ನಾಗಭೂಷಣ ಮಠದ ಶ್ರೀ ಪ್ರಣವಾನಂದ ಶ್ರೀಗಳು ವಹಿಸಲಿದ್ದಾರೆ. ಕೇಂದ್ರದ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ, ಶಾಸಕರಾದ ಎಂ.ಚಂದ್ರಪ್ಪ, ಮಾಜಿ ಸಚಿವರಾದ ಹೆಚ್.ಆಂಜನೇಯ, ಶ್ರೀರಾಮುಲು, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಬಿಜೆಪಿ ಅಧ್ಯಕ್ಷರಾದ ಎ.ಮುರಳಿ, ಮುಖಂಡರಾದ ಅನಿತ್ ಕುಮಾರ್, ಮಹಮ್ಮದ್ ಪಾಷ, 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು, ವೀರಶೈವ ಬ್ಯಾಂಕ್ ಅಧ್ಯಕ್ಷರಾದ ಪಟೇಲ್ ಶಿವಕುಮಾರ್, ವಾಣೀಜ್ಯೋದ್ಯಮಿಗಳಾದ ಶಂಕರ್‌ಮೂರ್ತಿ, ಬಿ.ಟಿ.ಸಿದ್ದೇಶ್ವರ್, ಸಿದ್ಧಾಪುರದ ನಾಗಣ್ಣ, ಚಲನಚಿತ್ರ ನಟರಾದ ದೊಡ್ಡಣ್ಣ, ಜಿಲ್ಲಾಧಿಕಾರಿಗಳಾದ ವೆಂಕಟೇಶ್, ಕಸಾಪ ಅಧ್ಯಕ್ಷರಾದ ಶಿವಸ್ವಾಮಿ, ವಿಹಿಂಪನ ದಕ್ಷಿಣ ಪ್ರಾಂತದ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ್ ಸ್ವಾಮಿ, ವಕ್ಪ್ ಬೋರ್ಡ್ ಅಧ್ಯಕ್ಷರಾದ ಆನ್ವರ್ ಪಾಷ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಶ್ರೀ ಗೀತಾಗಾಯನ ಗಾನಯೋಗಿ ಸಂಗೀತ ಬಳಗದ ತೋಟಪ್ಪ ಉತ್ತಂಗೆ ಶ್ರೀಮತಿ ಕೋಕಿಲ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ವಾರಿ ಭಜನಾ ಮಂಡಳಿಯ ಶ್ರೀಮತಿ ಸತ್ಯಪ್ರಭಾ ವಸಂತ್ ಕುಮಾರ್ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

 

ಮಾ. 6ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಬೆಂಗಳೂರಿನ ಗವಿಪುರಂನ ಶ್ರೀ ಭವಾನಿ ದತ್ತ ಮಠದ ಶ್ರೀ ಮಂಜುನಾಥ್ ಭಾರತಿ ಶ್ರೀಗಳು, ಹಾಸನದ ಶ್ರೀ ಆದಿಚುಂಚುನಗಿರಿಯ ಶಾಖಾ ಮಠದ ಶ್ರೀ ಶಂಬುನಾಥ್ ಶ್ರೀಗಳು, ಚಿತ್ರದುರ್ಗದ ಯೋಗವನ ಬೆಟ್ಟದ ವನಶ್ರೀ ಮಠದ ಅಧ್ಯಕ್ಷರಾದ ಡಾ.ಶ್ರೀ ಬಸವಕುಮಾರ್ ಶ್ರೀಗಳು ವಹಿಸಲಿದ್ದಾರೆ. ಶಾಸಕರಾದ ಟಿ.ರಘುಮೂರ್ತಿ, ಬಿ.ದೇವೇಂದ್ರಪ್ಪ, ಲೋಕಸಭಾ ಮಾಜಿ ಸದಸ್ಯರಾದ ಎಂ.ಚಂದ್ರಪ್ಪ, ಜಿ.ಪಂ. ಸಿಇಓ ಸೋಮಶೇಖರ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖ್ ದೊ.ಕೇಶವಮೂರ್ತಿ, ವಿ.ಹಿ.ಪಂ.ನ ಜಗನ್ನಾಥ್ ಶಾಸ್ತ್ರಿಗಳು, ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠದ ಚೇರ್‌ಮನ್ ಬಸವರಾಜ್ ಶೆಟ್ಟರು, ಧರ್ಮದರ್ಶಿಗಳಾದ ಶ್ಯಾಮಾನಂದ ಬಾಳಪ್ಪ ಪೂಜಾರಿ, , 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು, ಜಿಲ್ಲಾ ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಸ.ಸಂದೀಪ್, ಪಿಟಿಎಸ್.ಪ್ರಾಂಶುಪಾಲರಾದ ಪಿ.ಪಾಪಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್‌ಪೀರ್, ಡಾ.ತಿಪ್ಪೇಸ್ವಾಮಿ ಜೆಜೆಹಟ್ಟಿ, ಎಸ್.ಆರ್.ಎಸ್ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಲಿಂಗಾರೆಡ್ಡಿ, ಸಾ.ಶಿ.ಇ.ಉಪ ನಿರ್ದೇಶಕರಾದ ಕೆ.ರವಿಶಂಕರ್ ರೆಡ್ಡಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಮಸ್ತರ ತಂಡದಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರಸಂಗ ನಡೆಯಲಿದೆ. ಶ್ರೀ ವಾಸವಿ ಮಿತ್ರ ವೃಂದದಿಂದ ಎಂ.ವೈ.ವೆಂಟಕೇಶ್ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಾ.7ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದ ಸಾನಿದ್ಯವನ್ನು ಹೊಸದುರ್ಗದ ಮದುರೆಯ ಬ್ರಹ್ಮವಿದ್ಯಾನಗರದ ಶಿಲಾಪುರಿ ಉಪ್ಪಾರ ಭಗೀರಥ ಮಹಾ ಸಂಸ್ಥಾನದ ಶ್ರೀ ಪುರುಷೋತ್ತಮಾನಂದಪುರಿ ಶ್ರೀಗಳು, ಶೃಂಗೇರಿಯ ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ್ ಶ್ರೀಗಳು, ಚಿಕ್ಕಬಳಾಪುರದ ಶ್ರೀ ಮಂಗಳನಾಥ್ ಶ್ರೀಗಳು ವಹಿಸಲಿದ್ದಾರೆ. ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ ಗೋಪಾಲಕೃಷ್ಣ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್, , 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು, ಜೆಡಿಎಸ್ ಅಧ್ಯಕ್ಷರಾದ ಎಂ.ಜಯ್ಯಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರೇಖಾ, ಮುಖಂಡರಾದ ರಘುಚಂದನ್, ಪೌರಾಯುಕ್ತರಾದ ಶ್ರೀಮತಿ ರೇಣುಕಾ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡರಾದ ಗೋಪಿಕೃಷ್ಣ, ಹೂದಿಗೆರೆ ರಮೇಶ್, ನಗರಸಭಾ ಸದಸ್ಯರಾದ ಶ್ರೀಮತಿ ಪೂಜಾ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಭಕ್ತಿ ಸಿಂಚನ ಕಾರ್ಯಕ್ರಮದಲ್ಲಿ ಜೀ,ಕನ್ನಡ ಸರಿಗಮದ ಜ್ಯೋತಿ ರವಿಪ್ರಕಾಶ್‌ರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಶ್ರೀ ಸಪ್ತಗಿರಿ ಭಜನಾ ಮಂಡಳಿವತಿಯ ಶ್ರೀಮತಿ ಲಕ್ಷ್ಮೀ ಶ್ರೀನಿವಾಸ್ ತಂಡದಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.

ಮಾ.8 ಮಧ್ಯಾಹ್ನ 2.30ಕ್ಕೆ ನಗರದ ರಾಜ ಬೀದಿಗಳಲ್ಲಿ ಶ್ರೀ ಕಬೀರಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ನಡೆಯಲಿದೆ, ಇದರ ಉದ್ಘಾಟನೆಯನ್ನು , 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು ನೇರವೇರಿಸಲಿದ್ದಾರೆ. ಇದರಲ್ಲಿ ಕೀಲುಕುದುರೆ, ತಮಟೆ, ಜಾಂಜ್ ನೃತ್ಯ, ಕಿನ್ನರಿಜೋಗಿ, ಲಂಬಾಣಿ ನೃತ್ಯ, ಖಾಸಾಬೇಡರಪಡೆ, ಡೊಳ್ಳು ಕುಣಿತ, ಕೋಲಾಟ ಭಜನೆ ಶಾರದ ಬ್ರಾಸ್ ಬ್ಯಾಂಡ್ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ.

ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಚಳ್ಳಕೆರೆಯ ಶ್ರೀ ಸದ್ಗುರು ನರಹರಿ ಪೀಠದ ಪೀಠಾಧಿಪತಿಗಳಾದ ಶ್ರೀ ರಾಜಾರಾಮ್ ಶ್ರೀಗಳು, ಹಾವೇರಿಯ ಕೂಸನೂರಿನ ಶ್ರೀ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಶ್ರೀಗಳು ಹಾಗೂ ಇಲಕಲ್ಲ ಶ್ರೀ ಚಿದಾನಂದಸ್ವಾಮಿ ಶ್ರೀ ಗುರು ಬಿಷ್ಠಯ್ಯಸ್ವಾಮಿ ಅವಧೂತರ ಮಠದ  ಮಾತೋಶ್ರೀ ಶ್ರೀ ಶರಣಮ್ಮ ತಾಯಿ ಆಗಮಿಸಲಿದ್ದಾರೆ.

ದಾವಣಗೆರೆ ಸಂಸದರಾದ ಜಿ.ಎಂ.ಸಿದ್ದಶ್ವರ, ಮಾಜಿ ಸಂಸದರಾಧ ಜನಾರ್ಧನಸ್ವಾಮಿ, ಮೈಸೂರಿನ ಸಿದ್ದಾಂತಿ ಡಾ.ಗುರುನಾಥ್ ಕೆ.ಹೆಗಡೆ, ನಗರಸಭಾ ಸದಸ್ಯರಾದ ವೆಂಕಟೇಶ್, , 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು, ವಾಣೀಜ್ಯೋದ್ಯಮಿಗಳಾದ ರುದ್ರಮುನಿ, ಪ್ರಭುದೇವ್, ಜಯಕುಮಾರ್, ಅದಿಜಾಂಬವ ಅಭೀವೃದ್ದಿ ನಿಗಮ ಎಂ.ಡಿ. ಮಂಜುನಾಥ್, ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ.ಎಂವಿರೇಶ್, ಸಾಯಿಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಸಂಜೀವಮೂರ್ತಿ, ಕರವೇ ಜಿಲ್ಲಾಧ್ಯಕ್ಷ ರಮೇಶ್, ಅನುಪಮ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಭಾಸ್ಕರ್, ಸಾಹಿತಿಗಳಾದ ಬಿ.ಆರ್.ಪುಟ್ಟಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಕೊಪ್ಪಳದ ಭರತನಾಟ್ಯ ಕಲಾವಿದರಾದ ಮಯೂರಿ ಬಸವರಾಜ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಾ.9 ರಂದು ಬ್ರಾಹ್ಮೀ ಮಹೂರ್ತದಲ್ಲಿ ಶಿವಮಹಿಮ್ನಾ ಸ್ತೋತ್ರ ಸ್ವಾನದೊಂದಿಗೆ ಸಪ್ತಾಹ ಸಮಾಪ್ತಿಯಾಗಲಿದ್ದು, ಸಂಜೆ 5 ಕ್ಕೆ ಸನ್ಯಾಸಿ ವಿಧಿಯಂತೆ ಕೌದಿ ಪೂಜೆ ಕಾರ್ಯಕ್ರಮ ನಡೆಯಲಿದ್ದು, ಕುಂಬಳಗೂಡಿನ ಬಿ,ಜಿ.ಎಸ್.ಗ್ರೂಪ್‌ನ ಎಸಿಎಂ, ಮಠದ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀಪ್ರಕಾಶನಾಥ ಶ್ರೀಗಳು ಭಾಗವಹಿಸಲಿದ್ದಾರೆ ಎಂದರು.

ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಶಿವಪೂಜೆ ಮತ್ತು ಉಪವಾಸ ನಾನಾ ರೀತಿಯಲ್ಲಿ ಭಕ್ತರು ಆಚರಿಸುವ ಮೂಲಕ ಮಹಾ ಶಿವರಾತ್ರಿಯನ್ನು ತನ್ನದೆ ಆದ ವಿಶಿಷ್ಟ ರೀತಿಯಲ್ಲಿ ನಡೆಸುತ್ತಿದ್ದಾರೆ. ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳ ಆದೇಶದಂತೆ ಚಿತ್ರದುರ್ಗದಲ್ಲಿ ಮಾನವರ ಕಲ್ಯಾಣಕ್ಕಾಗಿ ಸ್ಥಾಪಿಸಿದ ಆದ್ವೈತ, ಜಾತ್ಯಾತೀತ ಸಂಪ್ರದಾಯ ಮಠವೇ ಶ್ರೀ ಸದ್ಗುರು ಕಬೀರಾನಂದ ಆಶ್ರಮವಾಗಿದೆ. ಗುರುಗಳ ಪರಂಪರೆಯಂತೆ ಪ್ರತಿ ವರ್ಷವೂ ಶಿವನಾಮ ಸಪ್ತಾಹವನ್ನು ಮಹಾ ಶಿವರಾತ್ರಿ ಸಮಯದಲ್ಲಿ ನಡೆಸಿಕೊಂಡು ಬರುತ್ತಿದೆ. ಇದು ಮಠದ ವೈಶಿಷ್ಟವಾಗಿದೆ. ಶಿವನಾಮ ಸಪ್ತಾಹವನ್ನು ಜಾತಿ-ಮತಗಳ ಚೌಕಟ್ಟನ್ನು ಮೀರಿ ನಾಡಿನ ಜನರ ಭಾವೈಕ್ಯ ಸಾಧನೆಯನ್ನು ಮಾಡಲಾಗುತ್ತಿದೆ ಎಂದರು.

ಶಿವರಾತ್ರಿ ಎಂದರೆ ಶಿವನನ್ನು ಭಕ್ತಿಯಿಂದ ಆದಿನ ಆರಾಧನೆ ಮಾಡುವುದರ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಬೇಕಿದೆ. ಶಿವ ದಕ್ಷಿಣ ಪ್ರಾಂತ್ಯದವನು ಎನ್ನವುದು ಹೆಮ್ಮೆಯ ವಿಷಯವಾಗಿದೆ. 1924 ರಿಂದ ಚಿತ್ರದುರ್ಗದ ಕಬೀರಾನಂದಾಶ್ರಮದಲ್ಲಿ ಶಿವರಾತ್ರಿ ಸಪ್ತಾಹ ಪ್ರಾರಂಭವಾಯಿತು ಆರಂಭದಲ್ಲಿ ಅಷ್ಟಾಗಿ ಬೆಳಕಿಗೆ ಬಾರದೆ ಶ್ರೀಮಠದಲ್ಲಿ ಸೂಕ್ತವಾಗಿ ನಡೆಯುತ್ತಾ ಬರುತ್ತಿತ್ತು ಇತ್ತೀಚಿನ ದಿನಮಾನದಲ್ಲಿ ಇದು ಬೆಳಕಿಗೆ ಬರುವುದರ ಮೂಲಕ ಮಧ್ಯ ಕರ್ನಾಟಕದಲ್ಲಿ ಹಬ್ಬವಾಗಿ ರೂಪುಗೊಂಡಿದೆ, ಶಿವರಾತ್ರಿ ಎಂದರೆ ಕಬೀರಾನಂದಾಶ್ರಮ, ನವರಾತ್ರಿ ಎಂದರೆ ಮುರುಘಾ ಮಠ ಎಂಬ ಅರ್ಥದಲ್ಲಿ ಬರುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧಿಶರು ಆಗಮಿಸುವುದರ ಮೂಲಕ ತಮ್ಮ ಮಾತಿನ ಮೂಲಕ ಪಾಂಡಿತ್ಯವನ್ನು ಪ್ರದರ್ಶನ ನೀಡಲಿದ್ದಾರೆ. ಇಂದಿನ  ದಿನಮಾನದಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಅಗತ್ಯ ಇದೆ. ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರವನ್ನು ಕಲಿಸುವವರೇ ಮೊಬೈಲ್ ದೂರದರ್ಶನದ ಮೊರೆ ಹೋಗಿದ್ದಾರೆ. ನಮ್ಮ ಮನಸ್ಸುನ್ನು ಸಂಸ್ಕಾರದ ಕಡೆ ಒಲವನ್ನು ಮೂಡಿಸಬೇಕಿದೆ ಎಂದರು.

ಗೋಷ್ಟಿಯಲ್ಲಿ ಕಾರ್ಯದರ್ಶಿ ಪ್ರಶಾಂತ್, ಸಮಿತಿಯ ಉಪಾಧ್ಯಕ್ಷರಾದ ಸಿದ್ದವ್ವನಹಳ್ಳಿ ಪರಮೇಶ್, ಸದಸ್ಯರಾದ ಓಂಕಾರ್, ಪ್ರತಾಪ್ ಜೋಗಿ, ಗೋಪಾಲಸ್ವಾಮಿ ನಾಯ್ಕ್, ನಾಗರಾಜ್ ಸಗಂ ಸತೀಶ್, ರುದ್ರೇಶ್, ನಿರಂಜನ, ತಿಪ್ಪೇಸ್ವಾಮಿ, ಗಣಪತಿ ಶಾಸ್ತ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ : ಎಸ್ಐಟಿ ಮುಂದೆ ಹಾಜರಾಗುವುದು ಉತ್ತಮ ಎಂದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಇನ್ನು ಪತ್ತೆಯಾಗಿಲ್ಲ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿಗೆ ಪ್ರಶ್ನೆ ಎದುರಾದಾಗ, ಆರೋಪಿ ಆಗಿದ್ದವನು ಆರೋಪವನ್ನು ಎದುರಿಸಬೇಕು. ಕಾನೂನು ಹೋರಾಟವನ್ನು ಮಾಡಬೇಕು ಎಂದಿದ್ದಾರೆ.   ಆರೋಪವೆಂಬುದು

ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಕೋರಿದ ಎಸ್ ಆರ್ ಎಸ್ ಹೆರಿಟೇಜ್ ಶಾಲೆ

  ಸುದ್ದಿಒನ್, ಚಿತ್ರದುರ್ಗ, ಮೇ. 20 : ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು 2024-25 ರ ಶೈಕ್ಷಣಿಕ ವರ್ಷ ಸೋಮವಾರದಿಂದ ಆರಂಭಗೊಂಡಿದ್ದು ಬೇಸಿಗೆ ರಜಾ ಮುಗಿಸಿಕೊಂಡು ಶಾಲೆಯತ್ತ ಮುಖ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ

ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಮೇ 20: ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ

error: Content is protected !!