ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ಫೆ. 23) : ಫೆ. 25 ರಿಂದ ಮಾ.1 ರವರೆಗೆ 92ನೇ ಮಹಾ ಶಿವರಾತ್ರಿ ಮಹೋತ್ಸವ ನಡೆಯಲಿದ್ದು, ಶಿವನಾಮ ಸಪ್ತಾಹವನ್ನು ಕಬೀರಾನಂದಾಶ್ರಮವು ಜಾತಿ-ಮತಗಳ ಚೌಕಟ್ಟನ್ನು ಮೀರಿ ನಾಡಿನ ಜನರ ಭಾವೈಕ್ಯ ಸಾಧನವನ್ನಾಗಿ ಸಾಧಿಸಿರುವ ಆಶ್ರಮವಾಗಿದೆ.
ಪ್ರತಿ ದಿನ ವಿವಿಧ ಮಠಾಧೀಶರು, ಸಾಹಿತಿಗಳು, ವಿಚಾರವಂತರು, ನಾಡಿನ ವಿಶೇಷ ಆಹ್ವಾನಿತರು ತಮ್ಮ ಉಪನ್ಯಾಸವನ್ನು ನೀಡಲಿದ್ದಾರೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ನಗರದ ಕಬೀರಾನಂದಾಶ್ರಮದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಶ್ರೀಗಳು, ಫೆ. 25 ರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಡಾ.ನಿರ್ಮಾಲಾನಂದನಾಥ ಶ್ರೀಗಳು ಉದ್ಘಾಟನೆ ಮಾಡಲಿದ್ದಾರೆ.
ಸಭಾ ಮಂಟಪವನ್ನು ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಶ್ರೀ ಗುರು ದತ್ತಾವಧೂತ ಆಶ್ರಮದ ಶ್ರೀ ಸತ್ ಉಪಾಸಿ ಅವಧೂತರು, ವನಶ್ರೀಮಠದ ಯೋಗವನ ಬೆಟ್ಟದ ಅಧ್ಯಕ್ಷರಾದ ಡಾ.ಬಸವಕುಮಾರಸ್ವಾಮಿಗಳು, ಡಾಬಸ್ ಪೇಟೆಯ ಮನಕಲ್ಲು ಮಲ್ಲೇಶ್ವರ ಮಠದ ಶ್ರೀ ರಮಾನಂದಸ್ವಾಮಿಗಳು ನೇರವೇರಿಸಲಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್.ನವೀನ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಆರ್.ಬೀಮಸೇನ್ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎ.ಮುರಳಿ, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಟಿ.ಸುರೇಶ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ನಂದಿನಾಗರಾಜ್, ಬಿಜೆಪಿ ಮುಖಂಡರಾದ ಎಂ.ಎ ಸೇತುರಾಮ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಕೆ.ಜಿ.ಮೂಡಲಗಿರಿಯಪ್ಪ, ನಗರಸಭಾ ಸದಸ್ಯರಾದ ಶ್ರೀಮತಿ ರೇಖಾ ಮಂಜುನಾಥ್, ನಗರಾಭಿವೃದ್ದಿ ಸದಸ್ಯರಾದ ಶ್ರೀಮತಿ ರೇಖಾ, ವಿ.ಆರ್ ನಾಗರಾಜ್, ಡಿ.ರಾಜು, ಶ್ರೀಮತಿ ಉಷಾಬಾಯಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠದ ಪಿಯು ಕಾಲೇಜು ಮತ್ತು ಪ್ರಶಿಕ್ಷಣ ಮಹಾ ವಿದ್ಯಾಲಯ ಹಾಗೂ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀ ವಾರಿ ಭಜನಾ ಮಂಡಳಿಯ ಶ್ರೀಮತಿ ಸತ್ಯಪ್ರಭಾ ಮತ್ತು ತಂಡದಿಂದ ಭಜನೆ ನಡೆಯಲಿದೆ.
ಫೆ. 26ರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಶ್ರೀಗಳು,ಹುಬ್ಬಳಿಯ ಜಡೆಸಿದ್ದೇಶ್ವರಮಠದ ಶ್ರೀ ರಮಾನಂದ ಭಾರತಿ ಶ್ರೀಗಳು ಹಾಗೂ ಸಿದ್ದಾರೂಢಮಠದ ಶ್ರೀ ಸಚ್ಚಿದಾನಂದ ಶ್ರೀಗಳು ಸಾನಿಧ್ಯವಹಿಸಲಿದ್ದಾರೆ.
ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ರಾಜ್ಯ ಸಾಬೂನು ಮಾರ್ಜಕ ನಿಯಮಿತದ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ , ವಾಣಿಜ್ಯೋದ್ಯಮಿ ಬಿ.ಟಿ.ಸಿದ್ದೇಶ್, ವಾಗ್ಮೀಗಳಾದ ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ಓಬಿಸಿ ರಾಜ್ಯ ಉಪಾಧ್ಯಕ್ಷರಾದ ಸಿದ್ದೇಶ್ ಯಾದವ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್, ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ ವಾಣಿಜ್ಯೊದ್ಯಮಿಗಳಾದ ಕೆ.ಸಿ.ವಿರೇಂದ್ರ, ಪಟೇಲ್ ಶಿವಕುಮಾರ್, ಶಂಕರಮೂರ್ತಿ, ಜೆ.ಎಂ.ಜಯಕುಮಾರ್, ಸಿದ್ದಾಪುರದ ನಾಗಣ್ಣ, ಕೋಗುಂಡೆ ದ್ಯಾಮಣ್ಣ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಉಪಾಧ್ಯಕ್ಷರಾದ ಡಾ.ಟಿ.ಹೆಚ್.ಅಂಜನಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಶ್ರೀ ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯಲಿದೆ. ಶ್ರೀ ಸಪ್ತಗಿರಿ ಭಜನಾ ಮಂಡಳಿವತಿಯಿಂದ ಶ್ರೀಮತಿ ಲಕ್ಷ್ಮೀ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಫೆ. 27 ರ ಸಂಜೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಹಾಸನದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾಮಠದ ಶ್ರೀ ಶಂಭುನಾಥ್ ಶ್ರೀಗಳು ಹಾಗೂ ಹಂಪಿಯ ಹೇಮಕೂಟದ ಶ್ರೀ ಶಿವರಾಮ ಅವಧೂತ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ವಿದ್ಯಾನಂದ ಭಾರತಿ ಶ್ರೀಗಳು ವಹಿಸಲಿದ್ದಾರೆ.
ಹಟ್ಟಿ ಚಿನ್ನದಗಣಿ ಅಧ್ಯಕ್ಷರಾದ ಮಾನಪ್ಪ ವಜ್ಜಲ್, ಕರ್ನಾಟಕ ಲಲಿತಾ ಅಕಾಡೆಮಿಯ ಅಧ್ಯಕ್ಷರಾದ ಮಹಿಂದ್ರ, ವಿಹಿಪನ ಸಂಘಟನಾ ಕಾರ್ಯದರ್ಶೀ ಬಸವರಾಜ್, ಲೋಕೋಪಯೋಗಿ ಇಲಾಖೆಯ ಆಯುಕ್ತರಾದ ಬಿ.ಎಚ್.ಅನಿಲ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ್, ಪೋಲಿಸ್ ತರಬೇತಿ ಕೇಂದ್ರದ ಪಾಂಶುಪಾಲರಾದ ಪಿ.ಪಾಪಣ್ಣ, ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠ ಟ್ರಸ್ಟ್ ಕಮಿಟಿಯ ವೇರ‍್ಮನ್ ಬಿ.ಡಿ.ಮಾಳಗಿ ಶ್ರೀ ಸಿದ್ದರೂಢ ಮಠದ ಧರ್ಮದರ್ಶಿಗಳಾದ ಶಾಮಾನಂದ ಪೂಜಾರಿ ಮಾಜಿ ಸಚಿವರಾದ ಹೆಚ್.ಅಂಜನೇಯ, ಶಾಸಕ ರಘುಮೂರ್ತಿ, ಮಾಜಿ ಸಂಸದ ಬಿ.ಎಂ.ಚಂದ್ರಪ್ಪ, ರಾಜ್ಯ ಕಾಂಗ್ರೇಸ್ ವಕ್ತಾರರಾದ ನೀಕೇತ್ ರಾಜ್ ಮೌರ್ಯ, ಮುಖಂಡರಾದ ಜಿ.ಎಸ್.ಮಂಜುನಾಥ್, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಸ್.ಸಂದೀಪ್ ನ್ಯಾಯಾವಾದಿಗಳಾದ ಫಾತ್ಯರಾಜನ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಗಾನಯೋಗಿ ಪರಿಷತ್ ಜಿಲ್ಲಾ ಘಟಕದವತಿಯಿಂದ ಗೀತಾಗಾಯನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜೈ ವಾಸವಿ ಭಜನಾ ಮಂಡಳಿವತಿಯಿಂದ ಎಂ.ವೈ. ವೆಂಕಟೇಶ್ ಮತ್ತು ತಂಡದಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.
ಫೆ. 28ರ ಸಂಜೆಯ ಕಾರ್ಯಕ್ರಮದಲ್ಲಿ ಹೊಸದುರ್ಗದ ಶಿಲಾಪುರಿ ಉಪ್ಪಾರ ಭಗೀರಥ ಮಹಾ ಸಂಸ್ಥಾನದ ಶ್ರೀ ಪುರುಷೋತ್ತಮಾನಂದ ಶ್ರೀಗಳು, ಕುಂಬಳಗೋಡು ಬಿ.ಜಿ.ಎಸ್.ಗ್ರೂಪ್‌ನ ಎ.ಸಿ.ಎಂ.ಮಠದ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ಪ್ರಕಾಶನಾಥ್ ಶ್ರೀಗಳು ಶ್ರೀ ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಮಡಿವಾಳ ಮಾಚಿದೇವ ಶ್ರೀಗಳು ಹಾಗೂ ಹಿರಿಯೂರಿನ ಶ್ರೀ ಆನಂದಶ್ರಮದ ಆಲೂರು ಶ್ರೀ ಶಂಕರಾನಂದ ಶೀಗಳು ಸಾನಿಧ್ಯವಹಿಸಲಿದ್ದಾರೆ.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ದಾವಣಗೆರೆ ಸಂಸದರಾಧ ಜಿ.ಎಮ್ ಸಿದ್ದೇಶ್ವರ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಂ, ಜನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ, ರಾಜ್ಯ ಖನಿಜ ನಿಗಮ ಮಂಡಳಿಯ ಅಧ್ಯಕ್ಷರಾದ ಎಸ್.ಲಿಂಗಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಎಸ್.ಅರುಣ್,ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್.ಮನ್ನಿಕೇರಿ ಜಿ.ಪಂ.ಸಿಇಓ ಶ್ರೀಮತಿ ನಂದಿನಿದೇವಿ, ಮಾಜಿ ಶಾಸಕರುಗಳಾದ ಎಸ್.ಕೆ.ಬಸವರಾಜನ್, ಹೆಚ್.ಎಸ್.ಶಿವಶಂಕರ್, ಜೆಡಿಎಸ್, ಜಿಲ್ಲಾಧ್ಯಕ್ಷ ಯಶೋಧರ, ನಗರಸಭೆ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಅಂಜನಾ ನೃತ್ಯ ಕಲಾಕೇಂದ್ರದ ಶ್ರೀಮತಿ ನಂದಿನಿ ಶಿವಪ್ರಕಾಶ್ ತಂಡದಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ವೆಂಕಟಾದ್ರಿ ಭಜನಾ ಮಂಡಳಿವತಿಯಿಂದ ಶ್ರೀಮತಿ ವರಲಕ್ಷ್ಮಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಾ.01 ರಂದು ಮಧ್ಯಾಹ್ನ 3 ಗಂಟೆಗೆ ನಗರದ ರಾಜ ಬೀದಿಗಳಲ್ಲಿ ಶ್ರೀ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ಕಾರ್ಯಕ್ರಮ ನಡೆಯಲಿದ್ದು, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಕೆ.ತಿಪ್ಪೇಸ್ವಾಮಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಈ ಉತ್ಸವದಲ್ಲಿ ಶ್ರೀ ಕಬೀರಾನಂದಸ್ವಾಮಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೀಲು ಕುದುರೆ, ತಮಟೆ ಕಲಾವಿದರು, ಜಾಂಜ್ ನೃತ್ಯ ಕಿನ್ನರಿ ಜೋಗಿ, ಲಂಬಾಣಿ ನೃತ್ಯ, ಖಾಸಾ ಖೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ಶಾರದ ಬ್ರಾಸ್ ಬ್ಯಾಂಡ್, ಜನಪದ ಕಲಾ ತಂಡಗಳೊಂದಿಗೆ ಶ್ರೀ ಅದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಜ್ಞಾನ ವಿಕಾಸ ಪಾಲಿಟೆಕ್ಕಿಕ್ ಕಾಲೇಜು, ಶ್ರೀ ಸದ್ಗುರು ಕಬೀರಾನಂದಸ್ವಾಮಿ ನರ್ಸಿಂಗ್ ಕಾಲೇಜು, ಪ್ರಥಮ ದರ್ಜೆ ಕಾಲೇಜು. ಬಿಇಡಿ, ಪಿಯು ಕಾಲೇಜು, ಪ್ರಾಥಮಿಕ ಮತ್ತು ಪ್ರೌಢ, ಸಂಸ್ಕೃತ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮೇಳ ನಡೆಯಲಿದೆ.
ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಬಾಗಲಕೋಟೆಯ ಅರಿಕೆರಿಯ ಶ್ರೀ ಕೌದಿರ್ಶವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ಹಾಗೂ ಕೂಸನೂರು ಶ್ರೀ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಶ್ರೀಗಳು ಸಾನಿಧ್ಯವಹಿಸಲಿದ್ದಾರೆ.
ನಗರಸಭಾ ಅಧ್ಯಕ್ಷರಾದ ಶ್ರೀಮತಿ ತಿಮ್ಮಪ್ಪ ವೆಂಕಟೇಶ್, ಸದಸ್ಯರಾದ ವೆಂಕಟೇಶ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಕೆ.ತಿಪ್ಪೇಸ್ವಾಮಿ, ಆಯುಕ್ತರಾದ ಸೋಮಶೇಖರ್, ಕರವೇ ಅಧ್ಯಕ್ಷ ಟಿ.ರಮೇಶ್, ಡಾ.ಮುಕುಂದರಾವ್, ಡಾ.ಶ್ರೀಧರ್ ಮೂರ್ತಿ, ಭದ್ರಾವತಿಯ ಸಿದ್ದಾರೂಢ ಆಶ್ರಮದ ಶಾಖಾಮಠದ ಉಪಾಧ್ಯಕ್ಷರಾದ ಬೆನಕಪ್ಪ, ಡಿ.ರಾಮಮೂರ್ತಿ, ಭದ್ರಾವತಿಯ ಕೆ.ಎಸ್.ವಿಜಯಕುಮಾರ್, ಬಾಬಣ್ಣ, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ತುಮಕೂರಿನ ನಾಟಕ ಮನೆ ಇವರಿಂದ ಮಾಮಾ ಮೂಷಿ ಹಾಸ್ಯ ನಾಟಕ ಪ್ರದರ್ಶನವಾಗಲಿದೆ.
ಮಾ. 2 ರಂದು ಬ್ರಾಹ್ಮಿ ಮಹೂರ್ತದಲ್ಲಿ ಶಿವಮಹಿಮಾ ಸ್ತೋತ್ರ ವಿಭೂತಿ ಸ್ನಾನದೊಂದಿಗೆ ಸಪ್ತಾಹ ಸಮಾಪ್ತಿಯಾಗಲಿದ್ದು, ಸಂಜೆ 5 ಗಂಟೆಗೆ ಸನ್ಯಾಸಿ ವಿಧಿಯಂತೆ ಕೌದಿ ಪೂಜೆ ಕಾರ್ಯಕ್ರಮ ನಡೆಯಲಿದೆ.
92ನೇ ಶಿವನಾಮ ಸಪ್ತಾಹದ ಅಂಗವಾಗಿ ಫೆ. 23 ರಂದು ಬ್ರಾಹ್ಮೀ ಮಹೂರ್ತದಲ್ಲಿ ಕಳಸ ಸ್ಥಾಪನೆ, ಶ್ರೀ ಗುರು ಕರ್ತೃ ಗದ್ದಿಗೆಯ ಮೂರ್ತಿಗೆ ರುದ್ರಾಭೀಷೇಕ ಶಿವಮಹಿಮ್ನಾ ಸೋತ್ರದೊಂದಿಗೆ ಶಿವನಾಮ ಸಪ್ತಾಹ ಪ್ರಾರಭವಾಗಿ ಮಾ. 1ರವರೆಗೆ ಪ್ರತಿ ದಿನ ಪ್ರಾತಃಕಾಲ 5.30 ರಿಂದ 6.30ರವರೆಗೆ ಸಾಮೂಹಿಕ ಶ್ರೀಮದ್ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ನಡೆಯಲಿದೆ.
ಗೋಷ್ಟಿಯಲ್ಲಿ 92ನೇ ಮಹಾಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ಕೆ.ತಿಪ್ಪೇಸ್ವಾಮಿ (ಪೈಲ್ವಾನ್) ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ಓ.ಬಿ.ಸಿ.ರಾಜ್ಯ ಉಪಾಧ್ಯಕ್ಷರಾದ ಸಿದ್ದೇಶ್ ಯಾದವ್, ಸಂಪಿಗೆ ಸಿದ್ದೇಶ್ವರ್, ಜೀತೇಂದ್ರ ಹುಲಿಕುಂಟೆ, ನಾಗರಾಜ್ ಸಂಗಂ, ಜಯ್ಯಣ್ಣ, ನಿರಂಜನ, ತಿಪ್ಪೇಸ್ವಾಮಿ, ಶಾಸ್ತ್ರಿ ಸೇರಿದಂತೆ ಇತರರು ಬಾಗವಹಿಸಿದ್ದರು.