ಸುದ್ದಿಒನ್: ಛತ್ತೀಸ್‌ಗಢ ಹಿಂಸಾಚಾರದಿಂದ ರಕ್ತಸಿಕ್ತವಾಗಿದೆ. ಇಂದು ನಡೆದ ಮಾವೋವಾದಿಗಳ ದಾಳಿಯಲ್ಲಿ ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ. ಛತ್ತೀಸ್‌ಗಢದ ಬಿಜಾಪುರದಲ್ಲಿ ಈ ಭೀಕರ ಘಟನೆ ನಡೆದಿದೆ. ಭದ್ರತಾ ಪಡೆಗಳ ವಾಹನವನ್ನು ಮಾವೋವಾದಿಗಳು ನೆಲಬಾಂಬ್‌ನಿಂದ ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸುಕ್ಮಾ ಜಿಲ್ಲೆಯ ಕುಟ್ರು ಅರಣ್ಯ ಪ್ರದೇಶದ ಬೇದ್ರೆ-ಕುಟ್ರು ರಸ್ತೆಯಲ್ಲಿ ಮಾವೋವಾದಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ನೆಲಬಾಂಬ್ ಸ್ಫೋಟಕ್ಕೆ 9 ಮಂದಿ ಮೃತರಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರ ಸ್ಥಿತಿ ಗಂಬೀರವಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಸಮಯದಲ್ಲಿ ವ್ಯಾನ್‌ನಲ್ಲಿ 15 ಯೋಧರು ಇದ್ದರು ಎಂದು ತಿಳಿದು ಬಂದಿದೆ.
ಎಂಟು ಮಂದಿ ದಾಂತೇವಾಡ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಯೋಧರು ಮತ್ತು ಒಬ್ಬ ಚಾಲಕ ಸೇರಿದ್ದಾರೆ. ಘಟನೆ ನಡೆದಾಗ ದಾಂತೇವಾಡ, ನಾರಾಯಣಪುರ – ಬಿಜಾಪುರ ಜಿಲ್ಲೆಗಳ ಡಿಆರ್‌ಜಿ ತಂಡಗಳನ್ನು ಒಳಗೊಂಡ ಜಂಟಿ ಕಾರ್ಯಾಚರಣೆಯ ನಂತರ ಸಿಬ್ಬಂದಿ ಹಿಂತಿರುಗುತ್ತಿದ್ದರು ಎಂದು ಬಸ್ತಾರ್ ಐಜಿ ತಿಳಿಸಿದ್ದಾರೆ.