ಪ್ರಧಾನಿ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. 8ನೇ ವೇತನ ಆಯೋಗದ ಪರಿಷ್ಕರಣೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸದ್ಯದಲ್ಲಿಯೇ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳು ಮತ್ತು ನಿವೃತ್ತಿ ವೇತನದಲ್ಲು ಪರಿಷ್ಕರಣೆ ಆಗಲಿದೆ. ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನ್ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿದ್ದು, 7ನೇ ವಥನ ಆಯೋಗವನ್ನು 2016ರಲ್ಲಿ ಅಳವಡಿಸಲಾಗಿತ್ತು. ಸದ್ಯ ಅದರ ಅವಧಿ 2026ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಈಗ 8ನೇ ಆಯೋಗಕ್ಕೆ ಅನುಮತಿ ನೀಡಲಾಗಿದೆ.ವೀಗ ಒಪ್ಪಿಗೆ ನೀಡಲಾಗಿರುವ 8ನೇ ವೇತನ ಆಯೋಗದ ಫಲಾನುಭವ 2026ರಿಂದ ಸಿಗಲಿದೆ ಎಂದು ಅಶ್ವಿನ್ ಅವರು ಮಾಹಿತಿ ನೀಡಿದ್ದಾರೆ.

ಈ ವೇತನ ಆಯೋಗದ ಪರಿಷ್ಕರಣೆಯ ವಿಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ತಂದಿದೆ. ದೇಶದಲ್ಲಿ ಒಂದು ಕೋಟಿ ಕೇಂದ್ರ ಸರ್ಕಾರಿ ನೌಕರರು ಕೆಲಸ ಮಾಡುತ್ತಿದ್ದಾರೆ. ಹಾಗೇ ನಿವೃತ್ತಿ ಹೊಂದಿದವರು ಕೂಡ ಇದ್ದಾರೆ. ಕಳೆದ ಹಲವು ವರ್ಷಗಳಿಂದ 8ನೇ ವೇತನ ಆಯೋಗಕ್ಕೆ ಯಾವಾಗ ಒಪ್ಪಿಗೆ ಸಿಗಲಿದೆ ಎಂದು ನೌಕರರು ಕಾಯುತ್ತಿದ್ದರು. ಈಗ ಆ ಗಳಿಗೆಯು ಬಂದಾಗಿದೆ. ಸದ್ಯ ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆಯಂತೆಯೇ 8ನೇ ವೇತನ ಆಯೋಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಮೂಲಕ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರಿ ನೌಕರರಿಗೆ ವೇತನ, ತುಟ್ಟಿ ಭತ್ಯೆ ಹಾಗೂ ಪೆನ್ಶನ್ ಗಳು ಏರಿಕೆಯಾಗಲಿವೆ. ಇದು ನೌಕರರಿಗೆ ಖುಷಿ ತಂದುಕೊಟ್ಟಿದೆ.

