ಬೆಂಗಳೂರು: ಈಗಾಗಲೇ ಪ್ರಧಾನಿ ಮೋದಿ ಅವರು ವಂದೇ ಭಾರತ್ ಟ್ರೈನ್ ಗಳನ್ನು ಬಿಡಲಾಗಿದೆ. ಇದೀಗ ಬೆಂಗಳೂರಿನಲ್ಲಿಯೇ ವಂದೇ ಭಾರತ್ ಟ್ರೈನ್ ಸಿದ್ಧವಾಗಲಿದೆ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 80 ವಂದೇ ಭಾರತ್ ಟ್ರೈನ್ ಗಳನ್ನು ಸಿದ್ಧ ಮಾಡಲು BHEL ಗೆ ಭಾರತೀಯ ರೈಲ್ವೇಸ್ ಈ ಗುತ್ತಿಗೆ ನೀಡಿದೆ.
ರೈಲ್ವೇ ಗುತ್ತಿಗೆಯನ್ನು ಭಾರತೀಯ ಸಂಸ್ಥೆಗಳಿಗೆ ನೀಡುತ್ತಿರುವುದು ಇದೇ ಮೊದಲ ಬಾರಿಗೆಯಾಗಿದೆ. 2029ರಷ್ಟರ ಒಳಗೆ 80 ಸ್ಲೀಪರ್ ಕೋಚ್ ಟ್ರೈನುಗಳನ್ನು ತಯಾರಿಸಬೇಕಿದೆ. ಟ್ರೈನ್ ನ ವಿನ್ಯಾಸದಿಂದ ಹಿಡಿದು ಎಲ್ಲವನ್ನೂ ಪೂರ್ಣವಾಗಿ ತಯಾರಿಸಬೇಕಾಗಿದೆ. ಅಷ್ಟೇ ಅಲ್ಲ 35 ವರ್ಷಗಳ ಕಾಲ ಈ ಟ್ರೈನುಗಳ ಮೆಂಟೆನೆನ್ಸ್ ಗಳನ್ನು ಕೂಡ ಮಾಡಬೇಕಿದೆ. ಇದು ಗುತ್ತಿಗೆಯಲ್ಲಿರುವ ಷರತ್ತುಗಳಾಗಿದೆ. ಗುತ್ತುಗೆಯನ್ನು 6 ವರ್ಷದ ಅವಧಿಯವರೆಗೂ ನೆರವೇರಿಸಲಾಗುತ್ತದೆ.
ಎರಡು ವರ್ಷದ ಒಳಗೆ ಮೊದಲ ವಂದೇ ಭಾರತ್ ಟ್ರೈನಿನ ಪ್ರೋಟೋಟೈಪ್ ಒದಗಿಸಲಾಗುವುದು. ಅದಾದ ಬಳಿಕ ಉಳಿದ ಟ್ರೈನುಗಳನ್ನು ತಯಾರಿಸಿ ಭಾರತೀಯ ರೈಲ್ವೆಗೆ ಒಪ್ಪಿಸಲಾಗುವುದು ಎಂಬ ಮಾಹಿತಿಯನ್ನು ಇಲಾಖೆ ನೀಡಲಾಗಿದೆ. ಇನ್ನು ವಂದೇ ಭಾರತ್ ರೈಲುಗಳು ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಲಿದೆ.