ಧಾರವಾಡ: ಇವತ್ತು ಆ ಮಂಟಪದಲ್ಲಿ ಮದುವೆಯ ಸಂಭ್ರಮ ಮನೆ ಮಾಡಬೇಕಿತ್ತು. ಆದರೆ ಅಪಘಾತದ ಕಾರಣ ಸಂಪೂರ್ಣ ಸ್ಮಾಶನದ ಮೌನ ಆವರಿಸಿದೆ. ಮದುವೆ ಮಾಡಿ ಕಳುಹಿಸಕೊಡಬೇಕಾದವರೇ ಮಸಣದ ಕಡೆ ಪಯಣ ಬೆಳೆಸಿ ಬಾರದೂರಿಗೆ ಹೋಗಿದ್ದಾರೆ. ಧಾರವಾಡದಲ್ಲಿವನಡೆದ ಅಪಘಾತದಿಂದ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ರೇವಣಸಿದ್ದೇಶ್ಚರ ಮಠದಲ್ಲಿ ದಾಸನಕೊಪ್ಪ ಕುಟುಂಬಸ್ಥರು ನಿನ್ನೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ಅದೇ ಮಠದಲ್ಲಿ ಮದುವೆಯೂ ನಡೆಯಬೇಕಿತ್ತು. ಆದರೆ ದಾಸನಪ್ಪ ಕುಟುಂಬಸ್ಥರು ಬರುತ್ತಿದ್ದ ಕ್ರೂಸರ್ ಅಪಘಾತಕ್ಕೊಳಗಾಗಿದೆ. ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ 45 ವರ್ಷದ ಚೆನ್ನವ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. 8 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.