ಬೆಂಗಳೂರು; ಭ್ರಷ್ಟ ಅಧಿಕಾರಿಗಳ ಬಗ್ಗೆ ಮಾಹಿತಿ ಸಿಕ್ಕಿದ್ರೆ ಲೋಕಾಯುಕ್ತ ಪೊಲೀಸ್ ಸುಮ್ಮನೆ ಬಿಡೋರಲ್ಲ. ದಾಳಿ ನಡೆಸಿ ಅವರ ಜಾತಕವನ್ನ ಬಟಾಬಯಲು ಮಾಡ್ತಾರೆ. ಇಂದು ಕೂಡ ಅಂಥದ್ದೊಂದು ದಾಳಿ ನಡೆಸಿದ್ದಾರೆ. ರಾಜ್ಯ 8 ಅಧಿಕಾರಿಗಳಿಗೆ ದಿಢೀರನೇ ದಾಳಿ ಮಾಡಿ ಶಾಕ್ ನೀಡಿದ್ದಾರೆ. ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಆ ಬಗ್ಗೆ ಕಂಪ್ಲೀಟ್ ಡಿಟೈಲ್ ಇಲ್ಲಿದೆ.

ದಾವಣಗೆರೆಯ ಫುಡ್ ಸೇಫ್ಟಿ ಅಧಿಕಾರಿ ಡಾ.ನಾಗರಾಜ್ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಮನೆಯಲ್ಲಿ ಪತ್ತೆಯಾದ ಲಕ್ಷಾಂತರ ಮೌಲ್ಯದ ವಾಚ್, ಚಿನ್ನ, ಬೆಳ್ಳಿ, ನಗದನ್ನು ವಶಕ್ಕೆ ಪಡೆದಿದ್ದಾರೆ. ನಾಗರಾಜ್ ಗೆ ಸಂಬಂಧಿಸಿದಂತೆ ಐದು ಕಡೆಗಳಲ್ಲಿ ಅಕ್ರಮ ಆಸ್ತಿ ಇರುವ ಬಗ್ಗೆಯೂ ತನಿಖೆ ನಡೆಸಲಾಗಿದೆ.

ಇನ್ನು ಬೆಂಗಳೂರಿನಲ್ಲಿ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ಹೆಚ್.ಬಿ.ಕಲ್ಲೇಶಪ್ಪಗೆ ಸೇರಿದ ಒಟ್ಟು ಆರು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿ, 4 ಕೋಟಿ 97 ಲಕ್ಷದ 34 ಸಾವಿರ ಸ್ಥಿರ ಆಸ್ತಿ ಹಾಗೂ 1 ಕೋಟಿ 53 ಲಕ್ಷದ 18 ಸಾವಿರ ಮೌಲ್ಯದ ಚರಾಸ್ಥಿ ಪತ್ತೆಯಾಗಿದೆ. ಈ ಎಲ್ಲದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಉಳಿದಂತೆ, ಬೆಂಗಳೂರಿನಲ್ಲಿ ವಾಸವಿರುವ ರೂರಲ್ ಡೆವಲಪ್ಮೆಂಟ್ ಪಂಚಾಯತ್ ರಾಜ್ ನ ಚೀಫ್ ಇಂಜಿನಿಯರ್ ನಂಜುಡಪ್ಪ, ಕಲಬುರಗಿಯ NGO ಕಾಲೋನಿ ನಿವಾಸದಲ್ಲಿರುವ ಲೋಕೋಪಯೋಗಿ ಇಲಾಖೆಯ ಚೀಫ್ ಇಂಜಿನಿಯರ್ ಜಗನ್ನಾಥನ ಮನೆಯಲ್ಲಿ ಅಪಾರ ಪ್ರಮಾಣದ ವಜ್ರ, ವೈಡೂರ್ಯ ಪತ್ತೆಯಾಗಿದೆ. ಕೋಲಾರದಲ್ಲಿ ಬೆಸ್ಕಾಂ ಎಇಇ ನಾಗರಾಜ್ಗೆ ಸೇರಿದ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಅಕೌಂಟೆಂಟ್ ಮಲ್ಲೇಶ್, ವಿಜಯಪುರದಲ್ಲಿ ಕೆಹೆಚ್ಬಿ FDA ಶಿವಾನಂದ ಕೆಂಬಾವಿ, ತುಮಕೂರಿನಲ್ಲಿ ವೈದ್ಯ ಜಗದೀಶ್ ಮನೆ ಮೇಲೂ ರೇಡ್ ಮಾಡಲಾಯ್ತು, ಆಸ್ತಿ, ಪಾಸ್ತಿ ಸಂಬಂಧ ಶೋಧ ಮಾಡಲಾಯ್ತು.


