ಬೆಂಗಳೂರು: ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. 7ನೇ ವೇತನ ಪರಿಷ್ಕರಣೆ ಆಗುತ್ತೆ ಎಂದೇ ಕಾಯುತ್ತಿದ್ದವರಿಗೆ ಅವಧಿ ಇನ್ನು ಮುಂದಕ್ಕೆ ಹೋಗಿದೆ. ವೇತನ ಪರಿಷ್ಕರಣೆಯ ಅವಧಿಯನ್ನು ಸರ್ಕಾರ ಆರು ತಿಂಗಳು ವಿಸ್ತರಣೆ ಮಾಡಿದೆ.
ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ವೇತನ ಆಯೋಗದ ವರದಿಯನ್ನು, ರಾಜ್ಯ ಸರ್ಕಾರ ನವೆಂಬರ್ ನಲ್ಲೇ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಈಗ ವೇತನ ಆಯೋಗದ ಪರಿಷ್ಕರಣೆಯನ್ನು 2024ಕ್ಕೆ ವಿಸ್ತರಣೆ ಮಾಡಲಾಗಿದೆ. ಇದು ಆಸೆಯಿಂದ ಕಾಯುತ್ತಿದ್ದ ನೌಕರರಿಗೆ ನಿರಾಸೆ ಮೂಡಿಸಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಇದು ಎರಡನೇ ಬಾರಿಗೆ ವಿಸ್ತರಣೆಯಾಗುತ್ತಿದೆ. ನವೆಂಬರ್ 18ಕ್ಕೆ ನೀಡಿದ್ದ ಮೊದಲ ಅವಧಿ ಮುಕ್ತಾಯವಾಗಿತ್ತು. ಆದರೆ ಮತ್ತೆ ಅವಧಿಯನ್ನು ವಿಸ್ತರಣೆ ಮಾಡಿರುವ ಸರ್ಕಾರ, ಆರು ತಿಂಗಳು ಮುಂದಕ್ಕೆ ಹಾಕಿದೆ.
ಸದ್ಯಕ್ಕೆ ಸರ್ಕಾರ ಅವಧಿಯ ವಿಸ್ತರಣೆಯನ್ನು ಆರು ತಿಂಗಳು ಮುಂದಕ್ಕೆ ಹಾಕಲಾಗಿದೆ. ಆದರೆ ಆರು ತಿಂಗಳಾದ ಮೇಲು ಎಷ್ರ ಮಟ್ಟಿಗೆ ಸಾಧ್ಯ ಎಂಬುದು ಮಾತ್ರ ಗೊತ್ತಿಲ್ಲ. ಯಾಕಂದ್ರೆ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಲೋಕಸಭಾ ಚುನಟವಣೆ ಬೇರೆ ಬರಲಿದೆ. ನೀತಿ ಸಂಹಿತೆ ಜಾರಿಯಾದರೆ ಆಗಲೂ ಪರಿಷ್ಕರಣೆ ಕಷ್ಟವಾಗುತ್ತದೆ. ಹೀಗಾಗಿ ವರದಿ ಸಲ್ಲಿಸಿದ ತಕ್ಷಣವೇ ಪರಿಷ್ಕರಣೆ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.