ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

suddionenews
3 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 15 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸ್ವ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ.ಬಿ.ವಿಜಯ ಕುಮಾರ್ ಅವರು ದೇಶದ ಬಗ್ಗೆ ಒಲವು ಅಭಿಮಾನ ಕೇವಲ ಈ ದಿನಕ್ಕಷ್ಟೇ ಸೀಮಿತವಾಗದೆ, ಪ್ರತಿ ದಿನ ಪ್ರತಿ ಕ್ಷಣ ನಮ್ಮಲ್ಲಿರಬೇಕು ಎಂದರು. ಅಲ್ಲದೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಪ್ರತಿಮ ದೇಶಭಕ್ತರನ್ನು ಸ್ಮರಿಸಿದರು. ಶಿಕ್ಷಕರರಾದವರು ಪ್ರತಿ ದಿನವು ಕನಿಷ್ಟ ಪಕ್ಷ 10 ರಿಂದ 15 ನಿಮಿಷ ದೇಶದ ವೀರ ಯೋಧರ ತ್ಯಾಗ ಬಲಿದಾನದ ಬಗ್ಗೆ ವಿವರಿಸಿ, ಮಕ್ಕಳಲ್ಲಿ ದೇಶ ಭಕ್ತಿಯ ಮನೋಭಾವವನ್ನು ಬೆಳೆಸುವುದು ಅಗತ್ಯವಾಗಿದೆ ಎಂದರು.

ನಂತರ ದೇಶದ ಮೂರು ಮುಖ್ಯ ಆಧಾರ ಸ್ತಂಭಗಳಾದ ಸೈನಿಕ, ಶಿಕ್ಷಕ ಮತ್ತು ಕೃಷಿಕರನ್ನು ಆಹ್ವಾನಿಸಿ ಈ ಸಂದರ್ಭದಲ್ಲಿ ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತಾ ಮಾಜಿ ಸೈನಿಕರಾದ ಶ್ರೀ.ಹೊನ್ನಳ್ಳಿ ರೆಡ್ಡಿ ಎಂ.ಹೆಚ್, ನಿವೃತ್ತ ಶಿಕ್ಷಕರಾದ ಶ್ರೀ.ಹುರುಳಿ ಎಂ.ಬಸವರಾಜ್ ಮತ್ತು ಪ್ರಗತಿಪರ ಕೃಷಿಕರಾದ ಶ್ರೀ.ಧನಂಜಯ ಹಂಪಯ್ಯನಮಾಳಿಗೆ ಇವರಿಗೆ ಸಂಸ್ಥೆಯ ಪರವಾಗಿ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್ ಅವರು ಸನ್ಮಾನಿಸಿದರು.

ನಂತರ ಸನ್ಮಾನ ಸ್ವೀಕರಿಸಿದ ಮಾಜಿ ಸೈನಿಕರಾದ ಹೊನ್ನಳ್ಳಿ ರೆಡ್ಡಿ ಎಂ.ಹೆಚ್‍. ರವರು ಮಕ್ಕಳನ್ನು ಉದ್ದೇಶಿಸಿ ಸ್ವಾತಂತ್ರ್ಯ ನಮಗೆ ಬಹುಸುಲಭವಾಗಿ ಸಿಕ್ಕಂತಹ ವಸ್ತುವಲ್ಲ, ಬ್ರಿಟಿಷರಿಂದ ನಾವು ಸ್ವತಂತ್ರರಾಗಲು ಸಾವಿರಾರು ಜನರ ತ್ಯಾಗ ಮತ್ತು ಬಲಿದಾನ ಮುಖ್ಯ ಪಾತ್ರ ವಹಿಸುತ್ತದೆ. ಸ್ವತಂತ್ರ್ಯೋತ್ಸವ ದಿನದಂದು ನಾವೆಲ್ಲರೂ ಸ್ವಂತಂತ್ರ ತಂದುಕೊಟ್ಟ ಮಹಾತ್ಮರೆಲ್ಲರನ್ನು ಸ್ಮರಿಸುತ್ತಾ ಇಂದು ನಮ್ಮೆಲ್ಲರನ್ನು ರಕ್ಷಿಸುತ್ತಿರುವ ವೀರ ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜೊತೆಗೆ ನಿವೆಲ್ಲರೂ ಚಿಕ್ಕವಯಸ್ಸಿನಿಂದಲೇ ದೇಶಾಭಿಮಾನವನ್ನು ಮೈಗೂಡಿಸಿಕೊಂಡು ದೇಶಕ್ಕೆ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ ಎಂದು ಕರೆಕೊಟ್ಟರು.

ನಂತರ ಸನ್ಮಾನಿತರಾದ ನಿವೃತ್ತ ಪೌಢಶಾಲಾ ಶಿಕ್ಷಕರಾದ ಶ್ರೀ.ಹುರುಳಿ ಎಂ.ಬಸವರಾಜ್‍ರವರು ದೇಶದ ಅಭಿವೃದ್ದಿಯಲ್ಲಿ ಸೈನಿಕ ಮತ್ತು ಕೃಷಿಕರ ಪಾತ್ರ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ಪಾಲು ಶಿಕ್ಷಕರದ್ದು, ಶಿಕ್ಷಕರು ತಮ್ಮ ಕೌಶಲ್ಯಗಳನ್ನು ಬಳಸಿಕೊಂಡು ಯುವ ಜನತೆಯನ್ನು ಹುರಿದುಂಬಿಸಿ ದೇಶ ಮಾನವ ಸಂಪನ್ಮೂಲವನ್ನು ಹೆಚ್ಚಿಸಿ ದೇಶ ಕಾಯುವ ಯೋಧರನ್ನು ಬೆಳೆಸಿ, ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ನ ನೀಡುವ ರೈತನ ಶ್ರಮವನ್ನ ಅರಿತು ಅವನ ಮಕ್ಕಳನ್ನು ಮುಖ್ಯ ವಾಹಿನಿಗೆ ಕರೆತಂದು ದೇಶದ ಅಭಿವೃದ್ದಿಯಲ್ಲಿ ತನ್ನ ಕೈಜೋಡಿಸಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮತ್ತೊರ್ವ ಸನ್ಮಾನಿತರಾದ ಪ್ರಗತಿಪರ ಕೃಷಿಕರಾದ ಶ್ರೀ.ಧನಂಜಯ ಅವರು ಮಾತನಾಡುತ್ತಾ ಇಂದಿನ ಪರಿಸ್ಥಿತಿಯಲ್ಲಿ ದೇಶಕ್ಕೆ ಅನ್ನ ನೀಡುತ್ತಿರುವ ರೈತರಾದ ನಮ್ಮ ಜೀವನ ಬಲು ಕಷ್ಟವಾಗಿದೆ. ರೈತರ ವಾಸ್ತವ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸರ್ಕಾರವು ಅವರಿಗೆ ಸೂಕ್ತ ಪರಿಹಾರಗಳನ್ನು ನೀಡಿ ಅವರ ಜೀವನಮಟ್ಟವನ್ನು ಸುಧಾರಿಸಬೇಕಿದೆ. ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಂತಹ ರೈತ ಇಂದು ಆತ್ಮಹತ್ಯೆಗೆ ಮುಂದಾಗುತ್ತಿದ್ದಾನೆ ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆಯಾಗಿದ್ದು, ಇಂತಹ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ ಎಂದರು.

ನಂತರ ಶಾಲೆಯ 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಪಟ್ಟ ಅನೇಕ ವರ್ಣರಂಜಿತ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳು ಅವರ ಪೋಷಕರು ಹಾಗೂ ಶಿಕ್ಷಕ ವೃಂದದವರು ಮಕ್ಕಳ ಮನೋರಂಜನಾ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್, ನಿರ್ದೇಶಕರಾದ ಸುನೀತಾ ವಿಜಯ ಕುಮಾರ್ ಸಂಸ್ಥೆಯ ವ್ಯವಸ್ಥಾಕ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ, ಐಸಿಎಸ್‍ಸಿ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ.ಎನ್.ಜಿ.ತಿಪ್ಪೇಸ್ವಾಮಿ, ಮಹೇಶ್.ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಶ್ರೀ.ಕೆಂಚನ ಗೌಡ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಹಾಗೂ ಮಹೇಶ್.ಪಿ.ಯು ಕಾಲೇಜಿನ ಶಿಕ್ಷಕ/ಶಿಕ್ಷಕೇತರ ವರ್ಗ ಹಾಗೂ ಶಾಲಾ ಪೋಷಕರು ಕಾರ್ಯಕ್ರÀಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ವೈಶಾಲಿ ನಿರೂಪಿಸಿದರು, ಕೃಷ್ಣವೇಣಿ ಸ್ವಾಗತಿಸಿದರು, ಸುಚಿತಾ ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *