ಎಂಟನೇ ತರಗತಿ, ಹತ್ತನೇ ತರಗತಿ, 12ನೇ ತರಗತಿ ಓದಿರುವವರಿಗೆ ಕೆಲಸಗಳ ಅವಕಾಶ ಇಲ್ಲಿದೆ. ಅಂಗನವಾಡಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. 723 ಅಂಗನವಾಡಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಇದೇ ತಿಂಗಳು ಕೊನೆಯ ದಿನಾಂಕವಾಗಿದೆ.
ಅಂಗನವಾಡಿ ಸಹಾಯಕಿ, ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ಏಪ್ರಿಲ್ 1ರಿಂದ ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕವಾಗಿದ್ದು, ಏಪ್ರಿಲ್ 17 ಕೊನೆಯ ದಿನಾಂಕವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಹ್ವಾನ ಮಾಡಲಾಗಿದೆ.
ಒಡಿಶಾದಲ್ಲಿ ಉದ್ಯೋಗ ಅವಕಾಶವಿದೆ. ಮಾಸಿಕ ವೇತನ 8 ಸಾವಿರದಿಂ 30 ಸಾವಿರದ ತನಕ ಸಂಬಳ ನಿಗದಿ ಮಾಡಲಾಗಿದೆ. ದಾಖಲಾತಿ ಪರಿಶೀಲನೆ ಮಾಡಿ, ಸಂದರ್ಶನ ಮೂಲಕ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಅರ್ಜಿ ನಮೂನೆಯಲ್ಲಿ ಜನನ ಪ್ರಮಾಣ ಪತ್ರ, ಎಸ್ಎಸ್ಎಲ್ಸಿ ಅಂಕಪಟ್ಟಿ ಸೇರಿದಂತೆ ಹಲವು ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ.