ನಾಯಕನಹಟ್ಟಿ ಹೋಬಳಿಯ ಶೇಖಡ 70 ರಷ್ಟು  ಮತದಾರರ ಬೆಂಬಲ : ಕಸಾಪಾ ಅಭ್ಯರ್ಥಿ ಚಿಕ್ಕಪ್ಪನಹಳ್ಳಿ ಷಣ್ಮುಖ

1 Min Read

ಚಿತ್ರದುರ್ಗ, (ನ.11) :  ರಾಜ್ಯದಲ್ಲಿಯೇ ಅತಿಹೆಚ್ಚು ಮತದಾರರನ್ನು ಹೊಂದಿರುವ ನಾಯಕನಹಟ್ಟಿ ಹೋಬಳಿ ಕೇಂದ್ರದ ಮತದಾರಲ್ಲಿ ಶೇಖಡ 70 ರಷ್ಟು  ಮತದಾರರು ನನಗೆ ಬೆಂಬಲಿಸಲಿದ್ದಾರೆ ಎಂದು  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಚಿಕ್ಕಪ್ಪನಹಳ್ಳಿ ಷಣ್ಮುಖ ತಿಳಿಸಿದರು.

ಅವರು ನಾಯಕನಹಟ್ಟಿಯಲ್ಲಿ ಗುರುವಾರ  ಕಸಾಪ ಚುನಾವಣೆಗೆ ಮಾತಯಾಚನೆ ಮಾಡಿ ಮಾತನಾಡಿ, ಜಿಲ್ಲೆಯ ಆರು ತಾಲ್ಲೂಕಿನಲ್ಲಿ ಬಹುತೇಕ  ಮತದಾರರು ನನ್ನ ಬೆಂಬಲಕ್ಕೆ ಇದ್ದು  ಗೆಲುವಿನ ಸನಿಹದಲ್ಲಿದ್ದೇನೆ  ನನ್ನ ಗೆಲುವಿಗೆ ಕಾಸಾಪ ಮತದಾರರು, ಸ್ನೇಹಿತರು, ಹಿತೈಷಿಗಳು, ಮಠಾದೀಶರು  ಸಾಹಿತಿಗಳು, ಹೋರಾಟಗಾರರು,ರೈತ ಸಂಘಟನೆ ಮುಖಂಡರು ಪ್ರತ್ಯೇಕವಾಗಿ ತೆರಳಿ ನನ್ನ ಪರವಾಗಿ ಅಭಿಮಾನದಿಂದ ಮತಯಾಚನೆ ನಡೆಸುತ್ತಿರುವುದರಿಂದ  ನನ್ನ ಗೆಲುವಿಗೆ ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಸಾಪ ಮಾಜಿ ಅಧ್ಯಕ್ಷ  ಶ. ಮಂಜುನಾಥ್ ಮಾತನಾಡಿ   ನಿಸ್ವಾರ್ಥ ಜನಪರವಾದ ಕಾಳಜಿ ನೇರ ನಿಷ್ಠುರ ಮನೋಭಾವದ  ಚಿಕ್ಕಪ್ಪನಹಳ್ಳಿ ಷಣ್ಮುಖ   ರವರನ್ನ  ಬೆಂಬಲಿಸಿ ಆಯ್ಕೆ ಮಾಡಿದರೆ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆ ಚುರುಕು ಗೊಳ್ಳುವುದಲ್ಲದೆ  ನೆನಗುದಿಗೆ ಬಿದ್ದಿರುವ  ಜಿಲ್ಲಾ ಕನ್ನಡ ಭವನ ಆಯ್ಕೆಯಾದ  ಎರಡು ವರ್ಷಗಳಲ್ಲಿ ಪೂರ್ತಿಗೊಳಿಸುವ ಇಚ್ಛಾಶಕ್ತಿ ಹೊಂದಿದ್ದಾರೆ ಹಾಗಾಗಿ ಇವರಿಗೆ ಒಂದು ಅವಕಾಶ ಮಾಡಿಕೊಡಿ ಎಂದರು.

ಈ ಸಂದರ್ಭದಲ್ಲಿ ನಾಯಕನಹಟ್ಟಿ ಕಸಾಪ ಹಿರಿಯ ಸದಸ್ಯರು ನಿವೃತ್ತ ಶಿಕ್ಷಕ ರಾದ ವೆಂಕಟೇಶ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ  ಮಹದೇವಪುರ ತಿಪ್ಪೇಸ್ವಾಮಿ, ತಿಮ್ಮಪ್ಪಯ್ಯ ನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಬಂಡೆ ಕಪಿಲೆ ಓಬಣ್ಣ, ನಾಯಕನಹಟ್ಟಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಪ್ರಭುಸ್ವಾಮಿ,ನಿವೃತ್ತ ಪ್ರಾಂಶುಪಾಲರಾದ ಗೋವಿಂದರೆಡ್ಡಿ,ಅಶೋಕ್ ಕುಮಾರ್ ಸಂಗೇನಹಳ್ಳಿ, ಯಾದವರೆಡ್ಡಿ, ನಿವೃತ್ತ ಡಿವೈಎಸ್ಪಿಗಳಾದ ಮಹಾಂತರೆಡ್ಡಿ, ಸೈಯದ್  ಇಸಾಕ್, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಉಮಾಪತಿ,ದೇವರಹಟ್ಟಿ ಧನಂಜಯ, ಬುಕ್ ಸ್ಟಾಲ್ ಸುರೇಶ್, ಪತ್ರಕರ್ತ ದಿನೇಶ್ ಗೌಡಗೆರೆ  ಅಭ್ಯರ್ಥಿ ಚಿಕ್ಕಪ್ಪನಹಳ್ಳಿ ಷಣ್ಮುಖ ಪರವಾಗಿ ಮಾತಯಾಚನೆ  ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *