ಒಡಿಶಾ : ಮದುವೆ ಅಂದ್ರೇನೆ ಸಂಭ್ರಮ.. ಆ ಸಂಭ್ರಮವಿದ್ದಾಗ ಹಾಡು, ಡ್ಯಾನ್ಸ್, ಪಟಾಕಿ ಹೊಡೆಯೋ ಖುಷಿ ಈ ಎಲ್ಲವೂ ಇದ್ದೆ ಇರುತ್ತೆ. ಆದ್ರೆ ಇಂಥ ಸಂಭ್ರಮ ಯಾವುದೋ ಪ್ರಾಣಿಗಳ ಪ್ರಾಣಕ್ಕೆ ತುತ್ತಾಗುತ್ತೆ ಅಂದ್ರೆ..? ಹೌದು ಅಂಥದ್ದೊಂದು ಘಟನೆ ಓಡಿಶಾದಲ್ಲಿ ನಡೆದಿದೆ.
ಬಾಲಸೋರ್ ಜಿಲ್ಲೆಯ ಕಂದರಗಡಿ ಎಂಬ ಗ್ರಾಮದಲ್ಲಿ ಇಂಥದ್ದೊಂದು ಕೇಸ್ ರಿಜಿಸ್ಟರ್ ಆಗಿದೆ. ಇದೇ ಗ್ರಾಮದಲ್ಲಿ ಮದುವೆ ಕಾರ್ಯಕ್ರಮವೊಂದು ನಡೆದಿದೆ. ಆ ಮದುವೆಯಲ್ಲಿ ಜೋರು ಡಿಜೆ ಸೌಂಡ್ ಹಾಕಿದ್ದಾರೆ. ಪಟಾಕಿ ಸಿಡಿಸಿ ಜೋರು ಶಬ್ದ ಮಾಡಿದ್ದಾರೆ.
ಇದೇ ಗ್ರಾಮದಲ್ಲಿ ರಂಜಿತ್ ಫರಿದಾ ಎಂಬ ವ್ಯಕ್ತಿ ದೊಡ್ಡ ಕೋಳಿ ಫಾರಂ ಇಟ್ಟುಕೊಂಡಿದ್ದಾರೆ. ಈ ಶಬ್ದಕ್ಕೆ ಕೊಳಿಗಳು ವಿಚಿತ್ರವಾಗಿ ವರ್ತಿಸಲು ಶುರಿ ಮಾಡಿವೆ. ಇದನ್ನು ಗಮನಿಸಿದ್ದ ರಂಜಿತ್ ಮದುವೆ ಸಮಾರಂಭಕ್ಕೆ ಹೋಗಿ, ಶಬ್ಧ ಕಡಿಮೆ ಮಾಡಲು ತಿಳಿಸಿದ್ದಾರೆ. ಆದರೂ ಅವರು ಶಬ್ಧ ಕಡಿಮೆ ಮಾಡಿಲ್ಲ. ಈ ಶಬ್ದಕ್ಕೆ, ಪಟಾಕಿ ವಾಸನೆಗೆ 63 ಕೋಳಿಗಳು ಸಾವನ್ನಪ್ಪಿವೆ ಎಂದು ರಂಜಿತ್ ಫರಿದಾ ಮದುವೆ ಮನೆಯವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕೋಳಿಗಳ ಸಾವಿಗೆ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.