ಇತ್ತೀಚೆಗೆ ಎಲ್ಲರ ಬಾಯಲ್ಲೂ, ಎಲ್ಲರ ಸ್ಟೇಟಸ್ ನಲ್ಲೂ ಅದೊಂದು ಹೆಸರು ಸಿಕ್ಕಾಪಟ್ಟೆ ಓಡಾಡುರ್ತಿದೆ. ಜೈಭೀಮ್ ಅನ್ನೋ ಸಿನಿಮಾ. ಅದರ ಪ್ರಚಾರವೇ ಸಿನಜಮಾವನ್ನ ಮತ್ತೆ ಮತ್ತೆ ನೋಡಬೇಕೆಂಬಂತೆ ಮಾಡಿದೆ. ಅಷ್ಟೇ ಅಲ್ಲ ನೋಡಬೇಕೆಂದುಕೊಂಡವರು ಸಿನಿಮಾ ನೋಡುವಂತೆ ಮಾಡಿದೆ. ಇದೀಗ ಆ ಸಿನಿಮಾದ ಒಂದು ಪಾತ್ರದಿಂದ ಸೂರ್ಯನ ಮೇಲೆ ಹಲ್ಲೆ ಮಾಡುವಂತೆ ಪ್ರಚೋದನೆ ಕೊಟ್ಟಂತಾಗಿದೆ.
ವನ್ನಿಯಾರ್ ಸಮುದಾಯದ ಜನರನ್ನ ನಾಚಿಸುವಂತೆ ಮಾಡಿದ ಸೂರ್ಯನ ಮೇಲೆ ಹಲ್ಲೆ ಮಾಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಪಿಎಂಕೆ ಪಕ್ಷದ ಪಝನಿ ಸಾಮಿ ಹೇಳಿಕೆ ನೀಡಿದ್ದಾರೆ. ಜೊತೆಗೆ ಅವರ ನಟನೆಯ ಯಾವುದೇ ಸಿನಿಮಾಗಳನ್ನು ಮಾಯಿಲಾಡುತುರೈ ಜಿಲ್ಲೆಯಲ್ಲಿ ಪ್ರದರ್ಶನಗೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ.
ನಟ ಸೂರ್ಯ ಜೈಭೀಮ್ ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ಶೋಷಿತ ಬುಡಕಟ್ಟು ಜನಾಂಗದವರ ಪರ ನ್ಯಾಯಕ್ಕಾಗಿ ನಿಲ್ತಾರೆ. ಸೂರ್ಯನ ಅಭಿನಯಕ್ಕೆ ಇಡೀ ಸಿನಿಮಾ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗಿರುವಾಗ ಇಂಥ ನಟನ ಮೇಲಿನ ಹಲ್ಲೆ ಮಾಡಿದವರಿಗೆ 1 ಲಕ್ಷ ಬಹುಮಾನ ಘೋಷಿಸಿದ್ದಾರೆ. ಕಾರಣ ಅದರಲ್ಲಿ ಬರುವ ಇನ್ಸ್ಪೆಕ್ಟರ್ ಪಾತ್ರದ ಹೆಸರು. ಹೌದು ಸಿನಿಮಾದಲ್ಲಿ ಕ್ರೂರವಾಗಿ ನಡೆದುಕೊಳ್ಳುವ ಇನ್ಸ್ಪೆಕ್ಟರ್ ಒಬ್ಬ ಇದ್ದಾನೆ. ಆತನ ಹೆಸರು ಗುರುಮೂರ್ತಿ.
ತಮಿಳುನಾಡಿನ ಪಿಎಂಕೆ ಪಕ್ಷದ ಶಾಸಕರಾಗಿ, ಪಕ್ಷದ ಮುಖಂಡರಾಗಿ ಕಾಡುವೆಟ್ಟಿ ಗುರು ತುಂಬಾ ಹೆಸರು ಮಾಡಿದವರು. 2018ರಲ್ಲಿ ನಿಧನರಾದ ಇವರಿಗೆ, ವನ್ನಿಯರ್ ಜನಾಂಗದ ಅಪಾರ ಅಭಿಮಾನಿಗಳಿದ್ದಾರೆ. ಅವರನ್ನ ಈ ಜನಾಂಗದವರು ದೇವರಂತೆ ಆರಾಧಿಸುತ್ತಾರೆ. ಆದ್ರೆ ಇವರದ್ದೇ ಹೆಸರನ್ನ ಜೈಭೀಮ್ ಸಿನಿಮಾದಲ್ಲಿ ವಿಲನ್ ಗೆ ಇಡಲಾಗಿದೆ ಎಂದು ಪಿಎಂಕೆ ಪಕ್ಷ ಆರೋಪಿಸಿದೆ. ಸಿನಿಮಾದಲ್ಲಿ ವಿಲನ್ ಹೆಸರು ಗುರುಮೂರ್ತಿಯಾಗಿರುತ್ತೆ. ಅದೇ ಪಾತ್ರದ ಹೆಸರನ್ನಿಟ್ಟುಕೊಂಡು ಈಗ ವಿವಾದದ ಕಿಡಿಹೊತ್ತಿಸುತ್ತಿದ್ದಾರೆ. ಸೂರ್ಯನ ಮೇಲಿನ ಹಲ್ಲೆಗೆ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.