ಬೆಂಗಳೂರು: ದೇಶದ ಬೆನ್ನೆಲುಬು ರೈತರು ಎಂದು ಹೇಳಲಾಗುತ್ತದೆ. ಆದರೆ ಅಂಥ ರೈತರ ಆತ್ಮಹತ್ಯೆಗಳು ಜಾಸ್ತಿಯಾಗುತ್ತಲೇ ಇದೆ. ಕಳೆದ 9 ತಿಂಗಳಲ್ಲಿ 601 ರೈತರ ಆತ್ಮಹತ್ತೆಗಳಾಗಿದೆ ಎಂದು ವರದಿ ಹೇಳುತ್ತಿದೆ. ಅಂಕಿ ಅಂಶಗಳ ಪ್ರಕಾರ ಇಷ್ಟೊಂದು ಆತ್ಮಹತ್ಯೆಗಳಾಗಿದ್ದು, ರೈತರ ಬೆಳೆನಾಶವೇ ಕಾರಣ ಎನ್ನಲಾಗುತ್ತಿದೆ.
ಮಳೆ ಕೊರತೆ, ಬೆಳೆ ಹಾನಿ, ಸಾಲದ ಹೊರೆ ಸೇರಿದಂತೆ ಹಲವು ಕಾರಣಗಳಿಂದ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗಂತೂ ಬರಗಾಲದಿಂದ ಹಾನಿಯಾದ ಬೆಳೆಗೂ ಪರಿಹಾರ ಸಿಗುತ್ತಿಲ್ಲ. ಸರಿಯಾದ ಪರಿಹಾರ ಸಿಗದೆ ರೈತರು ಕಂಗಾಲಾಗಿದ್ದಾರೆ. ಬರ ಪರಿಸ್ಥಿತಿಯಿಂದ ಉಂಟಾದ ನಷ್ಟಕ್ಕೆ ಸರ್ಕಾರ ಎರಡು ಸಾವಿರ ರೂಪಾಯಿ ಪರಿಹಾರ ನೀಡುತ್ತಿದೆ. ಪರಿಹಾರವೂ ಸರಿಯಾಗಿ ಸಿಗದೆ ಇರುವ ಕಾರಣ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಹಾವೇರಿ ಒಂದರಲ್ಲೆ 75 ಜನ ರೈತರು ಆತ್ಮಹತ್ಯೆ ಮಾಡಿಕಿಂಡಿದ್ದಾರೆ. ಬೆಳಗಾವಿಯಲ್ಲಿ 73, ಚಿಕ್ಕಮಗಳೂರಿನಲ್ಲಿ 60, ಧಾರಾವಾಡ 51, ಮೈಸೂರು 42, ಯಾದಗಿರಿ 32, ಶಿವಮೊಗ್ಗ-30, ಬೀದರ್ 29 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ಸರ್ವೆ ನಡೆಸಿದ್ದು, ಅದರಲ್ಲಿ 46.09 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಪ್ರದೇಶ ಬರಗಾಲಕ್ಕೆ ತುತ್ತಾಗಿದೆ. ಕೃಷಿ ಇಲಾಖೆ ಈ ಬಗ್ಗರೆ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ. 223 ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿದ್ದು, ₹35,162 ಸಾವಿರ ಕೋಟಿ ಬೆಳೆ ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರ್ಕಾರ ಕೇವಲ ₹105 ಕೋಟಿ ಮಾತ್ರ ಹಣ ಬಿಡುಗಡೆ ಮಾಡಿದೆ.