ಪೆನ್ಸಿಲ್‌ಗಳು ದುಬಾರಿಯಾದವು, ಮ್ಯಾಗಿ ಬೆಲೆ ಏರಿಕೆಯಾಗಿದೆ: ಪ್ರಧಾನಿ ಮೋದಿಗೆ ಪುಟ್ಟ ಹುಡುಗಿಯಿಂದ ಪತ್ರ

ನವದೆಹಲಿ: 1ನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲಕಿಯೊಬ್ಬಳು ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿರುವ ಕಷ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೆ ತನ್ನ ಪತ್ರದಲ್ಲಿ ಹೀಗೆ ಬರೆದಿದ್ದಾಳೆ, “ನನ್ನ ಹೆಸರು ಕೃತಿ ದುಬೆ. ನಾನು 1 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಜಿ, ನೀವು ಅಪಾರ ಬೆಲೆ ಏರಿಕೆ ಮಾಡಿದ್ದೀರಿ. ನನ್ನ ಪೆನ್ಸಿಲ್ ಮತ್ತು ರಬ್ಬರ್ (ಎರೇಸರ್) ದುಬಾರಿಯಾಗಿದೆ ಮತ್ತು ಮ್ಯಾಗಿಯ ಬೆಲೆಯೂ ಹೆಚ್ಚಾಗಿದೆ. ಈಗ ನನ್ನ ತಾಯಿ ಪೆನ್ಸಿಲ್ ಕೇಳಿದ್ದಕ್ಕಾಗಿ ನನ್ನನ್ನು ಹೊಡೆಯುತ್ತಾರೆ. ನಾನೇನು ಮಾಡಲಿ? ಇತರ ಮಕ್ಕಳು ನನ್ನ ಪೆನ್ಸಿಲ್ ಅನ್ನು ಕದಿಯುತ್ತಾರೆ.” ಎಂದು ಅಳಲು ತೋಡಿಕೊಂಡಿದ್ದಾಳೆ.

ಹಿಂದಿಯಲ್ಲಿ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಕೀಲರಾಗಿರುವ ಆಕೆಯ ತಂದೆ ವಿಶಾಲ್ ದುಬೆ, “ಇದು ನನ್ನ ಮಗಳ `ಮನ್ ಕಿ ಬಾತ್`. ಇತ್ತೀಚೆಗೆ ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಾಗ ತಾಯಿ ಗದರಿಸಿದಾಗ ಅವಳು ಸಿಟ್ಟಾದಳು ಎಂದಿದ್ದಾರೆ.

 

ಈ ಪುಟ್ಟ ಹುಡುಗಿಯ ಪತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಂಡಿದ್ದೇನೆ ಎಂದು ಛಿಬ್ರಾಮೌ ಎಸ್‌ಡಿಎಂ ಅಶೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. “ನಾನು ಮಗುವಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಿದ್ಧನಿದ್ದೇನೆ ಮತ್ತು ಆಕೆಯ ಪತ್ರವು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ” ಎಂದು ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *