ಕೇದಾರನಾಥ, (ಅ.18): ಇಂದು ಉತ್ತರಾಖಂಡದ ಕೇದಾರನಾಥ ಬಳಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.
ಹೆಲಿಕಾಪ್ಟರ್ ಗರುಡ್ ಚಟ್ಟಿ ಬಳಿ ಪತನಗೊಂಡಿದ್ದು, ಇದುವರೆಗೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
#Kedarnath #helicopter crash: SDRF continues rescue operation amid snow and overcast conditions. 7 persons in chopper have been identified as
1.पूर्वा रामानुज
2.कृति ब्राड
3.उर्वी
4.सुजाता
5.प्रेम कुमार
6.काला
7.पायलट अनिल सिंह @timesofindia @UttarakhandTOI @Anoopnautiyal1 pic.twitter.com/CnmM1N0eJp— kautilyasTOI (@kautilyasTOI) October 18, 2022
ದೆಹಲಿ ಮೂಲದ ಆರ್ಯನ್ ಏವಿಯೇಷನ್‌ಗೆ ಸೇರಿದ ಬೆಲ್ 407 ಹೆಲಿಕಾಪ್ಟರ್ ವಿಟಿ-ಆರ್‌ಪಿಎನ್ ಕೇದಾರನಾಥದಿಂದ ಗುಪ್ತಕಾಶಿಗೆ ಹೋಗುವ ಮಾರ್ಗದಲ್ಲಿ ಅಪಘಾತಕ್ಕೀಡಾಗಿದೆ. ಕೇದಾರನಾಥದಿಂದ ಟೇಕಾಫ್ ಆದ ಕೂಡಲೇ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ ಒಟ್ಟು ಏಳು ಮಂದಿ ಇದ್ದರು.
ಹವಾಮಾನ ವೈಪರೀತ್ಯದಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗರುಡ ಚಟ್ಟಿ ಬಳಿ ಆರ್ಯನ್ ಏವಿಯೇಷನ್ ಬೆಲ್-407 ಹೆಲಿಕಾಪ್ಟರ್ ವಿಟಿಗೆ ಬೆಂಕಿ ತಗುಲುವ ಮುನ್ನ ದೊಡ್ಡ ಶಬ್ದ ಕೇಳಿಸಿತು ಎಂದು ಏವಿಯೇಷನ್ ರೆಗ್ಯುಲೇಟರ್ ಮೂಲಗಳು ತಿಳಿಸಿವೆ.