Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕುಣಿಗಲ್ ಮಾರ್ಕೋನಳ್ಳಿ ಡ್ಯಾಂನಲ್ಲಿ ತುಮಕೂರಿನ 6 ಮಂದಿ‌ ಜಲ ಸಮಾಧಿ..!

---Advertisement---

 

ತುಮಕೂರು: ಸಾವು ಯಾವಾಗ, ಯಾರನ್ನ, ಹೇಗೆ ಕರೆಯುತ್ತೇ ಅನ್ನೋದು ಗೊತ್ತಾಗಲ್ಲ. ಅದರಲ್ಲೂ ನೀರಿನ ಜೊತೆಗೆ ಆಡುವಾಗ ಬಹಳ ಕಾಳಜಿಯಿಂದ ಇರಬೇಕು. ಸ್ವಲ್ಪ ಯಾಮಾರಿದರು ಪ್ರಾಣಕ್ಕೆ ಕುತ್ತು ಬರಲಿದೆ. ಅಂಥದ್ದೊಂದು ಘಟನೆ ಕುಣಿಗಲ್ ನ ಮಾರ್ಕೋನಳ್ಳಿ ಡ್ಯಾಂನಲ್ಲಿ ನಡೆದಿದೆ.

ಮಾರ್ಕೋನಳ್ಳಿಯ ಜಲಾಶಯದ ಹಿನ್ನೀರಿನಲ್ಲಿ ಆರು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ. ಮಂಗಳವಾರ ಈ ಘಟನೆ ನಡೆದಿದ್ದು, ಇಬ್ಬರ ಮೃತದೇಹ ಇಂದು ಸಿಕ್ಕಿದೆ ಉಳಿದವರ ಮೃತದೇಹಗಳ ಹುಡುಕಾಟ ನಡೆದಿದೆ. ತುಮಕೂರು ನಗರದ ಬಿಜಿ ಪಾಳ್ಯದ ಸಾಜಿಯಾ ಹಾಗೂ ಅರ್ಬಿನ್ ಎಂಬುವವರ ಮೃತದೇಹ ಸಿಕ್ಕಿದೆ.

ಉಳಿದಂತೆ 45 ವರ್ಷದ ತಬಾಸುಮ್, 44 ವರ್ಷದ ಶಬಾನ, 4 ವರ್ಷದ ಮಿಫ್ರಾ, 1 ವರ್ಷದ ಮಹಿಬ್ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ಮೇಲ್ನೋಟಕ್ಕೆ ಇವರೆಲ್ಲಾ ಕುಟುಂಬಸ್ಥರೇ ಆಗಿರಬಹುದಾ ಎಂದು ಅಂದಾಜಿಸಲಾಗುತ್ತಿದೆ. ಆದರೆ ಪುಟ್ಟ ಪುಟ್ಟ ಮಕ್ಕಳು ಕೂಡ ಹೀಗೆ ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ಆ ಸಂಕಟ ತಡೆದುಕೊಳ್ಳುವುದಕ್ಕೆ ಪೋಷಕರಿಂದ ಎಷ್ಟು ಕಷ್ಟ ಹೇಳಿ.

ಇವರ ಜೊತೆಗೇನೆ ಇದ್ದಂತ ನವಾಜ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೇಹಕ್ಕೆ ಸಣ್ಣ ಪುಟ್ಟ ನೋವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಲಾಶಯದ ಹಿನ್ನೀರು ಬಹಳ ರಭಸವಾಗಿ ಹರಿಯುತ್ತಿತ್ತು. ಆದರೆ ನೀರಿನ ಜೊತೆಗೆ ಆಟ ಆಡುವ ಬಯಕೆ ಇಂದು ಪ್ರಾಣವನ್ನೇ ತೆಗೆದಿದೆ. ಮೃತರೆಲ್ಲರು ಕುಣಿಗಲ್ ತಾಲೂಕಿನ ಮಾಗಡಿ ಪಾಳ್ಯದ ಗ್ರಾಮಕ್ಕೆ ಸಂಬಂಧಿಕರ ಮನೆಗೆಂದು ಹೋಗಿದ್ದರು. ಊಟ ಮುಗಿಸಿ, ಜಲಾಶಯ ನೋಡಿಕೊಂಡು ಬರಲು ಹೋಗಿದ್ದಾರೆ. ಹರಿಯುತ್ತಿದ್ದ ಹಿನ್ನೀರಿನಲ್ಲಿ ಆಟವಾಡುವುದಕ್ಕೆಂದು ನೀರಿಗೆ ಇಳಿದಾಗ ಈ ಘಟನೆ ನಡೆದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)