ಯಾದಗಿರಿ: ಇಲ್ಲಿನ ಶಾಂತಪುರ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರದ ಕುಟುಂಬ ಈ ದುರಂತಕ್ಕೆ ಬಲಿಯಾಗಿದೆ. ಈ ಸಂಬಂಧ ಯಾದಗಿರಿಯ ಎಸ್ಪಿ ಮಾಹಿತಿ ನೀಡಿದ್ದಾರೆ.
ಇಂಪ್ಯಾಕ್ಟ್ ರಭಸಕ್ಕೆ ಮುಂದಕ್ಕೆ ಎಳೆದುಕೊಂಡು ಬಂದಿದೆ. ಆ ಕಾರಣದಿಂದಾ ಬೆಂಕಿ ಹತ್ತಿದೆ. ಆ ಕ್ಷಣದಲ್ಲಿ ಮುಂದೆ ಇರೋರು ಹೊರಗೆ ಬರೋದಕ್ಕೆ ಆಗಿಲ್ಲ. ಹಿಂದೆ ಇರುವಂತವರೆಲ್ಲ ಹೊರಗಡೆ ಓಡಿ ಬಂದಿದ್ದಾರೆ. 32 ಜನ ಬೆಂಗಳೂರಿನಿಂದ ಪ್ರಯಾಣ ಶುರು ಮಾಡಿದ್ರು. ಅದರಲ್ಲಿ 20 ಜನ ಬಸ್ ನಲ್ಲಿ ಘಟನೆಯಾದಾಗ ಇದ್ರು. ಬ್ರೇಕ್ ಹಾಕಿದಾಗ ಸಣ್ಣ ಪುಟ್ಟ ಗಾಯಗಳಾಗಿವೆ. ಮಕ್ಕಳಿಬ್ಬರ ಪರಿಸ್ಥಿತಿ ಕೂಡ ಗಂಭೀರವಾಗಿದೆ. ಅದರಲ್ಲಿ ಒಬ್ಬರಂತು ಹೆಚ್ಚು ಗಂಭೀರವಾಗಿದ್ದಾರೆ. ಗುಲ್ಬರ್ಗಾಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗ್ತಾ ಇದೆ. ಅವರ ಕುಟುಂಬಸ್ಥರಿಂದ ದೂರು ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.

ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಆರ್ಎಲ್ ಬಸ್ ಬೆಂಗಳೂರು ಕಡೆಯಿಂದ ಗುಲ್ಬರ್ಗಾ ಹೋಗ್ತಾ ಇತ್ತು. ಕಿಯಾ ಕಾರು ವೇಣುಗೋಪಾಲ್ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರ್ತಾ ಇದ್ದರು. ಎಲ್ಲರೂ ಒಂದೇ ಕುಟುಂಬದವರಾಗಿದ್ದರು. ಕಾರಿನವರು ಓವರ್ ಟೇಕ್ ಮಾಡಿಕೊಂಡು ಬಂದಿರೋದಕ್ಕೆ ಈ ಘಟನೆ ನಡೆದಿರೋದು ಎಂದು ಸ್ಥಳೀಯರು ಕೂಡ ಹೇಳಿದ್ದಾರೆ. ಸದ್ಯ ಎಲ್ಲರನ್ನು ರಕ್ಷಿಸುವ ಪ್ರಯತ್ನ ನಡೆದಿದೆ. ಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಒವರ್ ಟೇಕ್ ಮಾಡಿಕೊಂಡು ಬಂದಿರೋದೇ ಇದಕ್ಕೆ ಕಾರಣ ಎಂದಿದ್ದಾರೆ.
















