ಬೆಂಗಳೂರು: ಈ ವರ್ಷದಿಂದ ಶಿಕ್ಷಣದ ನೀತಿ ಬದಲಾಗಿದೆ. ಹಲವು ವರ್ಷಗಳ ಹಿಂದೆ ಏಳನೇ ತರಗತಿ ಹಾಗೂ ಹತ್ತನೇ ತರಗತಿಗೆ ಇದ್ದ ಪಬ್ಲಿಕ್ ಪರೀಕ್ಷೆ ಬಳಿಕ ಹತ್ತನೇ ತರಗತಿಗೆ ಸೀಮಿತವಾಗಿತ್ತು. ಇದೀಗ ಈ ವರ್ಷದಿಂದ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೂ ನಡೆಯುತ್ತಿದೆ. ಅದರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಕಟಿಸಿದೆ.
ಮಾರ್ಚ್ ಎರಡನೇ ವಾರದಿಂದ ಪರೀಕ್ಷೆ ನಡೆಸಲು ಮಂಡಳಿಯೂ ನಿರ್ಧರಿಸಿದೆ. ಮಾರ್ಚ್ 13 ರಿಂದ ಮಾರ್ಚ್ 18ರ ತನಕ ಪರೀಕ್ಷೆಗಳು ನಡೆಯಲಿದೆ ಎಂದು ಮಾಹಿತಿ ನೀಡಿದೆ. ಅದಕ್ಕೂ ಮುನ್ನ ಮೌಖಿಕ ಪರೀಕ್ಷೆಗಳನ್ನು ನಡೆಸಲು ಸೂಚನೆ ನೀಡಲಾಗಿದೆ. ಮಾರ್ಚ್ 6ರಿಂದ ಮಾರ್ಚ್ 10ರ ತನಕ ಮೌಖಿಕ ಪರೀಕ್ಷೆಗಳನ್ನು ನಡೆಸಲು ಆಯಾ ಶಾಲೆಗಳಿಗೆ ಸೂಚನೆ ನೀಡಿದೆ.
5ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಇಂತಿದೆ :
15-3-23: ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು
16-3-23: ಗಣಿತ
17-3-23: ಪರಿಸರ ಅಧ್ಯಯನ
18-3-23: ಇಂಗ್ಲಿಷ್, ಕನ್ನಡ
8ನೇ ತರಗತಿಯ ವೇಳಾ ಪಟ್ಟಿ:
13-3-23: ಕನ್ನಡ, ಇಂಗ್ಲಿಷ್, ಇಂಗ್ಲಿಷ್(NCERT), ಹಿಂದಿ, ಉರ್ದು, ಮರಾಠಿ, ತೆಲಯಗು, ತಮಿಳು
14-3-23: ಇಂಗ್ಲಿಷ್, ಕನ್ನಡ (ದ್ವಿತೀಯ ಭಾಷೆ)
15-3-23: ಹಿಂದಿ, ಹಿಂದಿ (NCERT), ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
16-3-23: ಗಣಿತ
17-3-23: ವಿಜ್ಞಾನ
18-3-23: ಸಮಾಜ ವಿಜ್ಞಾನ