50 ಸಾವಿರ ಗಡಿದಾಟಿದ ಅಡಿಕೆ ಧಾರಣೆ : ರೈತರ ಮೊಗದಲ್ಲಿ ಸಂತಸ

1 Min Read

ದಾವಣಗೆರೆ: ಅಡಿಕೆ ದರ ದಿನೇ ದಿನೇ ಏರಿಕೆ ಇಳಿಕೆಯಾಗುತ್ತಲೆ ಇದೆ. ಕಳೆದ ಕೆಲವು ತಿಂಗಳಿನಿಂದ ಒಂದೇ ರೀತಿಯಿದ್ದ ಅಡಿಕೆ ಬೆಲೆ ಕಂಡು ರೈತರು ನಿರಾಸೆಗೊಂಡಿದ್ದರು. ಆದರೆ ಇದೀಗಕ್ವಿಂಟಾಲ್ ಅಡಿಕೆ ಬೆಲೆ 50 ಸಾವಿರ ಗಡಿ ದಾಟಿದೆ. ಇದು ರೈತರ ಮೊಗದಲ್ಲಿ ಸಂತಸವನ್ನು ತರಿಸಿದೆ.

ಅಡಿಕೆ ಬೆಲೆಯಲ್ಲಿ ಒಂದೇ ದಿ‌ಕ್ಕೆ 600 ರೂಪಾಯಿ ಬೆಲೆ ಏರಿಕೆಯಾಗಿದೆ. ಈ ಮೂಲಕ 51 ಸಾವಿರ ರೂಪಾಯಿಗಳತ್ತ ದಾಪುಗಾಲು ಇಟ್ಟಿದೆ. ಇನ್ನು ಮುಂದೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಒಂದು ಕಡೆ ಅಡಿಕೆ ಬೆಲೆ ಏರಿಕೆಯಾಗುತ್ತಿದೆ‌ ಎಂದು ಖುಷಿ ಪಡುವ ರೈತನಿಗೆ, ಮತ್ತೊಂದು ಸಂಕಷ್ಟ ಕೂಡ ಎದುರಾಗಿದೆ. ಮಳೆ ಇಲ್ಲದೆ ಅಡಿಕೆ ಗಿಡಗಳು ಒಣಗಿ ಹೋಗುತ್ತಿವೆ. ದಾವಣಗೆರೆ, ಚಿತ್ರದುರ್ಗ ಭಾಗದ ರೈತರಲ್ಲಿ ಈ ಚಿಂತೆ ಮನೆ ಮಾಡಿದೆ. ಭದ್ರಾ ನಾಲೆಯ ನೀರಾದರೂ ಸಿಕ್ಕರೆ ಇರುವ ಅಡಿಕೆ ಬೆಲೆಯನ್ನು ಉಳಿಸಿಕೊಳ್ಳಬಹುದು.

ಚನ್ನಗಿರಿಯ ಕೆಲವು ಭಾಗಗಳಿಗೆ ಮಾತ್ರ ಭದ್ರಾ ನಾಲೆಯ ನೀರು ಸಿಗುತ್ತಿದೆ. ಉಳಿದ ಭಾಗದಲ್ಲಿ ಬೋರ್ ವೆಲ್ ನೀರನ್ನೇ ನಂಬಿಕೊಂಡಿದ್ದಾರೆ. ಅಂತರ್ಜಲ ಕುಸಿತದಿಂದಾಗಿ ಬೋರ್ವೆಲ್ ನೀರು ಕೂಡ ಕುಸಿತವಾಗಿದೆ. ಬಿಸಿಲಿನ ಧಗೆ ಹೆಚ್ಚಾಗಿರುವ ಕಾರಣ ಈಗ ಎಷ್ಟೇ ಲಾಭ ಬಂದರು ಅದರಿಂದ ಗಿಡಗಳನ್ನು ಉಳಿಸಿಕೊಳ್ಳುವುದಕ್ಕೇನೆ ಖರ್ಚು ಮಾಡಲಾಗುತ್ತಿದೆ. ಚನ್ನಗಿರಿಯಲ್ಲಿ ವಿಶ್ವದಲ್ಲಿಯೇ ಖ್ಯಾತಿ ಪಡೆದಿರುವ ಸೂಳೇಕೆರೆ ಇದೆ. ಆದರೂ ಅಲ್ಲಿನ ನೀರು ಸಿಗುತ್ತಿಲ್ಲ ಎಂದು ಸ್ಥಳೀಯ ರೈತರು ಬೇಸರ ಹೊರ ಹಾಕುತ್ತಿದ್ದಾರೆ. ಚನ್ನಗಿರಿ ವಹಿವಾಟಿನಲ್ಲಿ ಪ್ರತಿ ಕ್ವಿಂಟಾಲ್ ಉತ್ತನ ರಾಶಿ ಅಡಿಕೆ ಕನಿಷ್ಠ 48,400 ರೂಪಾಯಿಗಳಿದ್ದು, ಗರಿಷ್ಠ ಬೆಲೆ 49,699 ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *