ತಲಾ ಶಾಸಕರಿಗೆ 50 ಕೋಟಿ ಆಮಿಷ : ಆಪರೇಷನ್ ಕಮಲದ ಬಗ್ಗೆ ಆಯನೂರು ಮಂಜುನಾಥ್ ಶಾಕಿಂಗ್ ಹೇಳಿಕೆ

1 Min Read

 

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಸಾಕಷ್ಟು ತಯಾರಿ ನಡೆಯುತ್ತಿದೆ. ಇದರ ನಡುವೆ ಆಪರೇಷನ್ ಕಮಲದ ಸದ್ದು ಹಾಗೂ ಆಪರೇಷನ್ ಹಸ್ತದ ಸದ್ದು ಎರಡು ಚರ್ಚೆಯಲ್ಲಿದೆ. ಇದೋಗ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆಪರೇಷನ್ ಕಮಲದ ಮೂಲಕ ತಲಾ ಶಾಸಕನಿಗೆ ಐವತ್ತು ಕೋಟಿ ಆಫರ್ ಮಾಡಲಾಗಿದೆಯಂತೆ‌.

ಈ ಬಗ್ಗೆ ಮಾತನಾಡಿದ ಆಯನೂರು ಮಂಜುನಾಥ್, ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡು ಹತಾಶೆ ಅನುಭವಿಸುತ್ತಿದ್ದಾರೆ. ಅದಕ್ಕಾಗಿಯೇ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆದ್ ಶಾಸಕರಿಗೆ ಬಿಜೆಪಿಯಿಂದ ಆಮಿಷ ಒಡ್ಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ವ್ಯಕ್ತಿಯೊಬ್ಬರು ಹಾಗೂ ಹಾಲಿ ಶಾಸಕರೊಬ್ಬರು ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಎಂದಿದ್ದಾರೆ.

ಸರ್ಕಾರ ಬೀಳಿಸುವ ಸಾಮರ್ಥ್ಯ ಈಶ್ವರಪ್ಪ ಅವರಿಗೆ ಇಲ್ಲ. ಈಶ್ವರಪ್ಪ ಪ್ರಭಾವ ಎಲ್ಲೂ ಇಲ್ಲ. ಸರ್ಕಾರ ಬೀಳಿಸುವ ಅಮೃತ ವಾಕ್ಯವನ್ನು ಹೇಳಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅವರೊಬ್ಬ ಅಪ್ರಬುದ್ಧ ರಾಜಕಾರಣಿ. ಬಿಜೆಪಿಗೆ ನಷ್ಟವಾಗಿರುವುದರಿಂದ ಅವರನ್ನು ಬಿಜೆಪಿಯಿಂದ ಹೊರಗೆ ಇಡಲಾಗಿದೆ. ಈಶ್ವರಪ್ಪ ಅವರಿಗೆ ಮಾತನಾಡುವ ಬಾಯಿ ಚಪಲವಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ಈಶ್ವರಪ್ಪ ಅವರನ್ನು ಯಾವ ಗುತ್ತಿಗೆದಾರ ಬಂದು ಭೇಟಿಯಾಗಿದ್ದು..? ಈಶ್ವರಪ್ಪ ಸಚಿವರಾಗಿದ್ದಾಗ ದುಡ್ಡು ದೋಚಿದ್ದು ಬಿಟ್ಟರೆ ಬೇರೆ ಏನು ಮಾಡಿಲ್ಲ. ಈಶ್ವರಪ್ಪ ಅವರದ್ದು ಹರಕು ಬಾಯಿ. ಅವರ ಯಾವ ಮಾತನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಬಿಎಸ್ವೈ ವಿರುದ್ಧವೇ ನಿರಂತರವಾಗಿ ಪಿತೂರಿ ಮಾಡಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಆಯನೂರು ಮಂಜುನಾಥ್ ಗರಂ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *