ದಾವಣಗೆರೆ: ಇತ್ತೀಚೆಗೆ ವಸತಿ ಶಾಲೆ, ಶಾಲೆಯ ಬಿಸಿಯೂಟದಲ್ಲಿ ಪೊಉಡ್ ಪಾಯಿಸನ್ ಕೇಸ್ ಹೆಚ್ಚಳವಾಗುತ್ತಲೆ ಇದೆ. ಅಡುಗೆ ಮಾಡುವವರು ಎಚ್ಚರದಿಂದ ಇನ್ನು ಇರದೆ ಹೋದರೆ ಮಕ್ಕಳ ಬಗ್ಗೆ ಪೋಷಕರಲ್ಲಿ ಆತಂಕ ಮೂಡೋದು ಸಹಜ.
ಇದೀಗ ಮತ್ತೊಂದು ವಸತಿ ಶಾಲೆಯಲ್ಲಿ ಮಕ್ಕಳು ವಿಷಾಹಾರ ಸೇವಿಸಿ, ಆಸ್ಪತ್ರೆಗೆ ಸೇರಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿಷಾಹಾರ ಸೇವಿಸಿ 50 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆ ಸೇರಿದ್ದಾರೆ.
ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯದು. ನಿನ್ನೆ ಮಧ್ಯಾಹ್ನ ಶಾಲೆಯಲ್ಲಿ ನೀಡಿದ ಅನ್ನ ಸಾಂಬಾರ್, ಪಾಯಸ ಸೇವಿಸಿದ್ದಾರೆ. ಇದರಿಂದಾಗಿ ಸಂಜೆ ವೇಳೆಗೆ ಹಲವು ಮಕ್ಕಳಲ್ಲಿ ವಾಂತಿ, ಲೂಸ್ ಮೋಷನ್ ಶುರುವಾಗಿದೆ. ಇದರಿಂದ 50ಕ್ಕೂ ಹೆಚ್ಚು ಮಕ್ಕಳನ್ನು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸೇರಿಸಿದ್ದು, ಉಳಿದ ಮಕ್ಕಳಿಗೆ ವಸತಿ ಶಾಲೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಓಡಿ ಬಂದ ಶಾಸಕ ರೇಣುಕಾಚಾರ್ಯ ಶಾಲೆ ಮತ್ತು ಆಸ್ಪತ್ರೆ ಎರಡು ಕಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಗೂ ಧೈರ್ಯ ಹೇಳಿ ವಾಪಾಸ್ ಆಗಿದ್ದಾರೆ. ಇತ್ತೀಚೆಗೆ ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ವಿಷಾಹಾರಾ ಕೇಸ್ ದಾಖಲಾಗುತ್ತಿದೆ. ಮಕ್ಕಳಿಗೆ ಅಡುಗೆ ಮಾಡುವಾಗ ಕೊಂಚ ಎಚ್ಚರವಹಿಸುವುದು ತುಂಬಾ ಉತ್ತಮ.