ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಮಾದರಿಯ ದಂಪತಿಯಾಗಿದ್ದಾರೆ. ಇಬ್ಬರಿಗೂ ಮುದ್ದಾದ ಮಗಳು ಇದ್ದಾಳೆ. ಆದರೆ ಮಗಳ ಫೋಟೋವನ್ನು ಇನ್ನು ಅಧಿಕೃತವಾಗಿ ರಿವಿಲ್ ಮಾಡಿಲ್ಲ. ಆದರೂ ಕ್ಯಾಮೆರಾ ಕಣ್ಣಿಗೆ ಮಗಳ ಫೋಟೋ ಬಿದ್ದಿತ್ತು. ಇದೀಗ ವಿರುಷ್ಕಾ ದಂಪತಿ 5ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಮುದ್ದಿನ ಹೆಂಡತಿ ಅನುಷ್ಕಾ ಶರ್ಮಾಗೆ ಸೋಷಿಯಲ್ ಮೀಡಿಯಾದಲ್ಲಿ ಮುದ್ದಾಗಿ ವಿಶ್ ಮಾಡಿದ್ದಾರೆ. “ಪ್ರೀತಿ ತುಂಬಿದ ಐದು ವರ್ಷಗಳ ಪಯಣ. ನಿನ್ನನ್ನು ಪಡೆಯೋದಕ್ಕೆ ನಾನೆಷ್ಟು ಪುನ್ಯ ಮಾಡಿದ್ದೆ. ನಿನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಅನುಷ್ಕಾ ಶರ್ಮಾ ಕೂಡ ವಿರಾಟ್ ಕೊಹ್ಲಿಗೆ ವಿಶ್ ಮಾಡಿದ್ದಾರೆ.
ಇನ್ನು ನೆಚ್ಚಿನ ಆಟಗಾರ ಹಾಗೂ ನೆಚ್ಚಿನ ನಟಿಯ ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳೆಲ್ಲಾ ವಿಶ್ ಮಾಡಿದ್ದಾರೆ. ಅದರಲ್ಲೂ ಅವರಿಬ್ಬರ ಸ್ಪೆಷಲ್ ಮೂಮೆಂಟ್ ಎನಿಸುವಂತ ಫೋಟೋಗಳನ್ನು ಶೇರ್ ಮಾಡುವ ಮೂಲಕ, ವಿಡಿಯೋ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.