Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

5 ಸಾವಿರ ಕೋಟಿ ಬಿಡುಗಡೆನೆ ಆಗಿಲ್ರೀ : ಬಿಜೆಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ಹೆಬ್ಬಾಳ್ಕರ್
---Advertisement---

ಬೆಳಗಾವಿ: ಗೃಹಲಕ್ಷ್ಮೀ ಹಣ ಬಿಡುಗಡೆಯಾದರು ರಾಜ್ಯದ ಮಹಿಳೆಯರಿಗೆ ಈ ಹಣ ಬಂದಿಲ್ಲ. ಹಾಗಾದ್ರೆ ಬಿಡುಗಡೆಯಾದ ಐದು ಕೋಟಿ ಹಣ ಎಲ್ಲಿ ಹೋಯ್ತು ಅಂತ ವಿರೋಧ ಪಕ್ಷದ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರತಿಕ್ರಿಯೆ ಹೀಗಿದೆ.

ಮಹಿಳೆಯರಿಗೆ ಮಾಡಿದಂತ ವಾಗ್ದಾನ, ವಚನವನ್ನು ಸಂಪೂರ್ಣವಾಗಿ, ಬದ್ಧತೆಯಿಂದ ನಾವೂ, ನಮ್ಮ ಸರ್ಕಾರ ನಿಭಾಯಿಸ್ತಾ ಇದೆ. ನಾನು ಹೇಳಿದ್ದು, 23 ಕಂತನ್ನ ಹಾಕಿದ್ದೀವಿ. 46 ಸಾವಿರ ರೂಪಾಯಿ ಒಬ್ಬೊಬ್ಬರಿಗೆ ಬಂದಿದೆ. 23 ಕಂತಿಗೆ. ಆಗಸ್ಟ್ ವರೆಗೂ ಕ್ಲಿಯರ್ ಇದೆ ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ‌. ಇವರು ಫೆಸಿಫಿಕ್ ಆಗಿ ಕೇಳಿದ್ದಹ ಫೆಬ್ರವರಿ – ಮಾರ್ಚ್ ದು.

ಫೈನಾಶ್ಸಿಯಲ್ ಡಿಪಾರ್ಟ್ಮೆಂಟ್ ಗೆ ಪ್ರತಿ ತಿಂಗಳು. ನಮ್ಮ ಇಲಾಖೆಯಿಂದ ಫೈಲ್ ಮೂವ್ ಮಾಡುತ್ತೇನೆ. 1 ಅಥವಾ 3ನೇ ತಾರೀಖಾದರು ಸರಿ ಹಣವನ್ನು ಮೂವ್ ಮಾಡಿ ಎಂದು ಫೈಲ್ ಕಳುಹಿಸುತ್ತೇವೆ. ಯಾವ ತಾರೀಖಿಗೆ ಫೈನಾನ್ಸ್ ಡಿಪಾರ್ಟ್ಮೆಂಟ್ ನಮ್ಮ ಫೈಲ್ ಕ್ಲಿಯರ್ ಮಾಡುತ್ತದೆಯೋ ಒಂದು ಕ್ಷಣ ಕೂಡ ತಡ ಮಾಡದೆ, ಗೃಹಲಕ್ಷ್ಮೀ ಅವರ ಅಕೌಂಟ್ ಗೆ ಹೋಗುವಂತೆ ನಾನು ನೋಡಿಕೊಳ್ಳುತ್ತೇನೆ. ಮಾರ್ಚ್ ಮತ್ತು ಫೆಬ್ರವರಿಯದ್ದು ಹೆಚ್ಚು ಕಡಿಮೆ ಆಗಿದ್ದರೆ, ಅದಕ್ಕೆ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರವನ್ನ ಕೊಡುತ್ತಾರೆ. ಪ್ರತಿಯೊಬ್ಬರಿಗೂ ರೈಟ್ ಟು ಇನ್ಫರ್ಮೆಷನ್ ಆಕ್ಟ್ ಗೊತ್ತಿದೆ. ವಿರೋಧ ಪಕ್ಷದವರು ಚೈಲ್ಡೀಶ್ ಆಗಿ ಪ್ರಶ್ನೆ ಕೇಳುವುದು ಬೇಡ. ಐದು ಸಾವಿರ ಕೋಟಿ ಎಲ್ಲೋಗಿದೆ ಅಂದ್ರೆ, ಬಿಡುಗಡೆನೇ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...