ದಕ್ಷಿಣ ಕನ್ನಡ: ರಾಜ್ಯದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ದಿನೇ ದಿನೇ ಭಯ ಹೆಚ್ಚು ಮಾಡುತ್ತಿದೆ. ಕರ್ನಾಟಕದಲ್ಲಿ ಎರಡು ಕೇಸ್ ಕಂಡಿದ್ದೆ ತಡ ಇದೀಗ ದಿನೇ ದಿನೇ ಒಮಿಕ್ರಾನ್ ಸೋಂಕಿತರ ಹೆಚ್ಚಳ ಜಾಸ್ತಿಯಾಗ್ತಾ ಇದೆ. ರಾಜ್ಯದಲ್ಲಿ ಇಂದು ಕೂಡ ಐವರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.
ಸರ್ಕಾರ ಒಮಿಕ್ರಾನ್ ಬರದಂತೆ ತಡೆಯಲು ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸುತ್ತಿದೆ. ಆದ್ರೂ ಒಮಿಕ್ರಾನ್ ದಾಳಿ ಕಡಿಮೆಯಾಗಿಲ್ಲ. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಐದು ಪ್ರಕರಣ ಕಂಡು ಬಂದಿದೆ. 2 ಕಾಲೇಜುಗಳಲ್ಲಿ ಐದು ಪ್ರಕರಣ ಪತ್ತೆಯಾಗಿದೆ.
ಒಂದು ಕಾಲೇಜಿನಲ್ಲಿ 4 ಕೇಸ್ ಮತ್ತೊಂದು ಕಾಲೇಜಿನಲ್ಲಿ ಒಂದು ಕೇಸ್ ದೃಢಪಟ್ಟಿದೆ. ಇದರಿಂದ ಕಾಲೇಜಿನ ಉಳಿದ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ. ಈಗಾಗಲೇ ಒಮಿಕ್ರಾನ್ ದೃಢ ಪಟ್ಟ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಸಂಪರ್ಕದಲ್ಲಿದ್ದವರನ್ನು ಮುಂಜಾಗ್ರತ ಕ್ರಮವಾಗಿ ಐಸೋಲೇಷನ್ ಮಾಡಲಾಗಿದೆ.
ಈ ಸಂಬಂಧ ಆರೋಗ್ಯ ಸಚಿವ ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಯುಕೆಗೆ ಪ್ರವಾಸ ಮಾಡಿದ್ದರು ಎನ್ನಲಾಗಿದೆ. ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ 18ಕ್ಕೆ ಏರಿಕೆಯಾಗಿದೆ.