ಬೆಂಗಳೂರಿನಲ್ಲಿ ಜನವರಿ 3 ಮತ್ತು 4 ರಂದು 4ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳ : ನಾಗರಾಜ್ ಸಂಗಮ್

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 27 :
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ವತಿಯಿಂದ ಡಿ. 28 ಮತ್ತು 29 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಗಲೂರಿನಲ್ಲಿ ಆಯೋಜಿಸಲಾಗಿದ್ದ 4ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್‍ರವರ ನಿಧನದ ಕಾರಣದಿಂದಾಗಿ 2025ರ ಜನವರಿ 3 ಮತ್ತು 4 ನೇ ತಾರೀಕಿಗೆ ಮುಂದೂಡಲಾಗಿದೆ ಎಂದು ಪರಿಷತ್‍ನ ಜಿಲ್ಲಾ ಅಧ್ಯಕ್ಷ ನಾಗರಾಜ್ ಸಂಗಮ್ ತಿಳಿಸಿದ್ದು, ಸಮ್ಮೇಳನದ ದಿನಾಂಕ ಮಾತ್ರ ಬದಲಾವಣೆಯಾಗಿದ್ದು ಉಳಿದಂತೆ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲರೂ ಸಹಕರಿಸುವಂತೆ ಕೋರಿದ್ದಾರೆ.

 

ಸಂತಾಪ : ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್‍ರವರ ನಿಧನಕ್ಕೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಜಿಲ್ಲಾ ಘಟಕ ಅಧ್ಯಕ್ಷರಾದ ನಾಗರಾಜ್ ಸಂಗಮ್ಮ ಮತ್ತು ಪದಾಧಿಕಾರಿಗಳು ಸಂತಾಪವನ್ನು ಸೂಚಿಸಿದ್ದು, ದೇಶದ ಕಂಡು ಆರ್ಥಿಕ ತಜ್ಞರಾಗಿದ್ದು ದೇಶವನ್ನು ಅವರ ಆಡಳಿತದ ಅವಧಿಯಲ್ಲಿ ಪ್ರಗತಿಯತ್ತ ಕೊಂಡ್ಯೂದಿದ್ದರು ಎಂದು ಅವರ ಆಡಳಿತಾವಧಿಯನ್ನು ಸ್ಮರಿಸಿದರು.

Leave a Reply

Your email address will not be published. Required fields are marked *

error: Content is protected !!