ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 478 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ.
ಕಳೆದ 24 ಗಂಟೆಯಲ್ಲಿ 22016 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 91136 RTPCR ಟೆಸ್ಟ್ ಸೇರಿದಂತೆ ಒಟ್ಟು 113152 ಟೆಸ್ಟ್ ಗಳನ್ನ ಮಾಡಲಾಗಿದೆ. ಅದರಲ್ಲಿ 478 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. 235 ಜನ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಉಳಿದಂತೆ ಕೊರೊನಾದಿಂದಾಗಿ 334 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 17 ಜನ ಗುಣಮುಖರಾಗದೆ ಕೊರೊನಾದಿಂದ ಕಳೆದ 24 ಗಂಟೆಯಲ್ಲಿ ಅಸುನೀಗಿದ್ದಾರೆ.