ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಹುಟ್ಟಿಸುತ್ತಿದೆ. ಎರಡು ಬಾರಿ ಬಂದ ಕೊರೊನಾ ಕೊಟ್ಟ ಹೊಡೆತ ಅಷ್ಟಿಷ್ಟಲ್ಲ. ಈಗಲೂ ಚೇತರಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಹೀಗಿರುವಾಗ ಮತ್ತೆ ಕೊರೊನಾ ಛಾಯೆ ರಾಜ್ಯದ ಮೇಲೆ ಬಿದ್ದರೆ ಜನರ ಮನಸ್ಥಿತಿ ಎಷ್ಟು ಆತಂಕಗೊಳ್ಳುತ್ತದೆ. ಈಗಾಗಲೇ ರಾಜ್ಯದಲ್ಲೂ ಕೊರೊನಾ ತನ್ನ ಆಟ ಶುರು ಮಾಡಿದೆ. ಪಾಸಿಟಿವ್ ಕೇಸ್ ಗಳು ಕಾಣಿಸಿಕೊಳ್ಳುತ್ತಿವೆ. ನಿನ್ನೆ ಒಂದೇ ದಿನ ಅಂದರೆ ಕಳೆದ 24 ಗಂಟೆಗಳಲ್ಲಿ 44 ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಈ ಮೂಲಕ ಒಟ್ಟು 79 ಪಾಸಿಟಿವ್ ಕೇಸ್ ಗಳು ಸಕ್ರೀಯವಾಗಿವೆ.
487 ಆರ್ಟಿಪಿಸಿಆರ್ ಹಾಗೂ 235 ಱಪಿಡ್ ಟೆಸ್ಟ್ಗಳನ್ನ ಮಾಡಲಾಗಿದೆ. ಇನ್ನು, 79 ಸಕ್ರಿಯ ಪ್ರಕರಣಗಳಲ್ಲಿ 62 ಕೇಸ್ಗಳು ಹೋಮ್ಐಸೋಲೇಷನ್ನಲ್ಲಿ ಇರಲು ಸೂಚನೆ ನೀಡಲಾಗಿದೆ. 17 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 6 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಕೇಸ್ ಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಕಾರಣ, ಆರೋಗ್ಯ ಸಚುವ ದಿನೇಶ್ ಗುಂಡೂರಾವ್ ಎಚ್ವರಿಕೆಯನ್ನು ನೊಇಡಿದ್ದಾರೆ. ಜನರು ಕೂಡ ಮುಂಜಾಗ್ರತ ಕ್ರಮಗಳನ್ನು ಪಾಲನೆ ಮಾಡಲು ಸೂಚಿಸಿದ್ದಾರೆ. ಅದರಲ್ಲೂ ವಯಸ್ಸಾದವರು ಕಡ್ಡಾಯವಾಗಿ ಮಾಸ್ಕ್ ಧರಿಸಲು ಹೇಳಿದ್ದಾರೆ. ಕೊರೊನಾ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ, ತಪಾಸಣೆಗೆ ಒಳಗಾಗಬೇಕು ಎಂದಿದ್ದಾರೆ. ವಾತಾವರಣ ಕೂಡ ತಂಪಾಗಿದ್ದು, ಪ್ರತಿ ವರ್ಷ ಈ ತಿಂಗಳಲ್ಲಿ ಜ್ವರ, ನೆಗಡಿ ಕಾಮನ್ ಆಗಿರುತ್ತದೆ. ಆದರೂ ಜನ ಸಾಮಾನ್ಯರು ಎಚ್ಚರದಿಂದ ಇರಬೇಕು.