ಕೊಡವ ಸಂಪ್ರದಾಯದಂತೆ ಮದುವೆಯಾದ ನಟಿ ಹರ್ಷಿಕಾ ಪೂಣಚ್ಚ ನಟ ಭುವನ್ ಪೊನ್ನಣ್ಣ

1 Min Read

 

ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ನಿನ್ನೆ(ಗುರುವಾರ) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡವ ಸಂಪ್ರದಾಯದಂತೆ ಅವರ ಊರಿನಲ್ಲಿಯೇ ಮದುವೆಯಾಗಿದ್ದಾರೆ. ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಮದುವೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಸೇರಿದಂತೆ ಎಲ್ಲರೂ ಹಾರೈಸಿದ್ದಾರೆ.

ಮದುವೆಯ ಬಳಿಕ ಮಾತನಾಡಿದ ಹರ್ಷಿಕಾ, ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನು ಭುವನ್ ನಲ್ಲಿ ಅರ್ಥ ಮಾಡಿಕೊಂಡಿದ್ದೇನೆ. ಗೆಳೆಯನನ್ನೇ ಮದುವೆಯಾಗಿದ್ದು ತುಂಬಾ ಖುಷಿ ಕೊಟ್ಟಿದೆ. ಇನ್ಮೇಲೆ ನಾನು ಅವರ ಕುಟುಂಬದಲ್ಲಿ ಒಬ್ಬಳು. ಒಳ್ಳೆಯ ಅತ್ತೆ, ಮಾವ ಸಿಕ್ಕಿದ್ದಾರೆ. ಈಗ ಭುವನ್ ನನ್ನ ಪ್ರೊಡ್ಯೂಸರ್ ಮಾಡಿದ್ದಾರೆ. ಸದ್ಯ ಆ ಕೆಲಸ ನಿರ್ವಹಿಸುತ್ತೇನೆ.

ಸಿನಿಮಾ ರಂಗವನ್ನು ಖಂಡಿತ ಬಿಡಲ್ಲ. ಅದರ ಜೊತೆಗೆ ನಮ್ಮ ಸಮಾಜಮುಖಿ ಕೆಲಸಗಳು ನಿಲ್ಲಲ್ಲ‌ ಪ್ರತಿ ತಂದೆಗೂ ಒಂದು ಆಸೆ‌ ಇರುತ್ತೆ. ನಮ್ಮ ತಂದೆಗೂ ಆಸೆ ಇತ್ತು. ನಮ್ಮ ತಂದೆಯನ್ನು ಈ ಸಂದರ್ಭದಲ್ಲಿ ತುಂಬಾ ಮಿಸ್ ಮಾಡಿಕೊಳಗಳುತ್ತೇನೆ ಎಂದಿದ್ದಾರೆ.

ನಾವು ಕರೆದ ಪ್ರತಿಯೊಬ್ಬರು ಮದುವೆಗೆ ಬಂದಿದ್ರು ಎಂದಿದ್ದಾರೆ. ನಾವು ಇಲ್ಲಿವರೆಗೂ ಏನೆಲ್ಲಾ ಕೆಲಸ ಮಾಡಿಕೊಂಡು ಬಂದಿದ್ದೇವೋ ಅದನ್ನೆಲ್ಲ ಮುಂದುವರೆಸುತ್ತೇವೆ. ಕೊಡಗಿನಲ್ಲಿ ಮದುವೆ ಅನ್ನೋದು ತುಂಬಾ ಡಿಫ್ರೆಂಟ್ ಆಗಿರುತ್ತೆ ಅಂತ ಎಲ್ಲರೂ ಬಂದ್ರು. ಯಡಿಯೂರಪ್ಪ ಸರ್, ನಿರಾಣಿ ಸರ್ ಬಂದಿದ್ದು ತುಂಬಾ ಖುಷಿ ಆಯ್ತು ಎಂದು ಭುವನ್ ಪೊನ್ನಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks