ಬೆಳಗಾವಿಯಲ್ಲಿ 400 ಕೋಟಿ ರಾಬರಿ ಕೇಸ್ : ಗುಜರಾತ್ ರಾಜಕಾರಣಿಯ ಕನೆಕ್ಷನ್..!

1 Min Read

 

ಕರ್ನಾಟಕ – ಗೋವಾ ಗಡಿಯಲ್ಲಿ 400 ಕೋಟಿ ರೂಪಾಯಿ ದರೋಡೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ದಿಡ್ಎ ಸಂಚಲನವೇ ಸೃಷ್ಟಿಯಾಗಿತ್ತು. ಎಸ್ಐಟಿ ಅಧಿಕಾರಿಗಳು ಇದರ ತನಿಖೆಯನ್ನ ನಡೆಸುತ್ತಿದ್ದಾರೆ. ಆರಂಭದಲ್ಲಿ ದರೋಡೆ ಎಂದು ಬಿಂಬಿತವಾಗಿದ್ದ ಕೇಸ್ ಗೆ ಈಗ ರಾಜಕೀಯದ ನಂಟು ಬೆಸೆದುಕೊಂಡಿದೆ. ಈ ಹಣ ಗುಜರಾತ್ ರಾಜಕಾರಣಿಯೊಬ್ಬರದ್ದು ಎನ್ನಲಾಗಿದೆ.

ತನಿಖೆಯಲ್ಲಿ ಈ ವಿಚಾರ ಹೊರಗೆ ಬಂದಿದ್ದು, ಈ 400 ಕೋಟಿ ರೂಪಾಯಿ ಗುಜರಾತ್ ನ ಅತ್ಯಂತ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎಂಬ ಮಾಹಿತಿ ಹೊರ ಬಿದ್ದಿದೆ. ಇದರಲ್ಲಿ ನಿಷೇಧಿತ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳನ್ನು ಗೋವಾದಿಂದ ಸಾಗಿಸಲಾಗುತ್ತಿತ್ತು. ಮಹಾರಾಷ್ಟ್ರದಿಂದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಸಾಳ್ವೆ ಅಲಿಯಾಸ್ ಶೇಟ್ ಈ ವ್ಯವಹಾರದ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ದರೋಡೆಯಾದ ಈ 400 ಕೋಟಿ ರೂಪಾಯಿ ಹಣವನ್ನು ಬೆಳಗಾವಿ ಮಾರ್ಗವಾಗಿ ತೆಲಂಗಾಣದ ಬಾಲಾಜಿ ಟ್ರಸ್ಟ್ ಗೆ ಸಾಗಿಸುವ ಹುನ್ನಾರ ನಡೆಸಲಾಗಿತ್ತು.

ಬಾಲಾಜಿ ಟ್ರಸ್ಟ್ ಗೆ ಕಪ್ಪು ಹಣವನ್ನು ನೀಡಿ, ಅದನ್ನು ಹಂತ ಹಂತವಾಗಿ ವೈಟ್ ಮನಿ ಆಗಿ ಪರಿವರ್ತಿಸುವ ಬೃಹತ್ ಸ್ಕೆಚ್ ಹಾಕಲಾಗಿತ್ತು. ಈ ಮೂಲಕ ಬೇನಾಮಿ ಆಸ್ತಿಗಳನ್ನು ಮಾಡಲು ಕಿಶೋರ್ ಶೇಟ್ ಮತ್ತು ತಂಡ ಪ್ಲ್ಯಾನ್ ರೂಪಿಸಿತ್ತು ಎನ್ನಲಾಗಿದೆ. ಹಣ ಸಾಗಾಟದ ಜವಾಬ್ದಾರಿಯನ್ನು ಆರೋಪಿ ವಿರಾಟ್ ಎಂಬಾತನಿಗೆ ನೀಡಲಾಗಿತ್ತು. ಹಣ ತುಂಬಿದ್ದ ಕಂಟೇನರ್ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಛೋರ್ಲಾ ಘಾಟ್ ಮೂಲಕ ಸಾಗುವಾಗ ವಿರಾಟ್ ನ ಹುಡುಗರು ಹಣದ ಸಮೇತ ನಾಪತ್ತೆಯಾಗಿದ್ದಾರೆ.

Share This Article