ಹುಬ್ಬಳ್ಳಿ: ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಅದಕ್ಕೂ ಮುನ್ನವೇ ರಾಜಕೀಯ ಪಕ್ಷಗಳು ಜನರ ಬಳಿಗೆ ಹೋಗಿ ಮನಗೆಲ್ಲುವ ಯತ್ನ ನಡೆಸುತ್ತಿವೆ. ಪ್ರಣಾಳಿಕೆ ಮೂಲಕ ಹಲವು ಭರವಸೆಗಳನ್ನು ನೀಡುತ್ತಿದ್ದಾರೆ. ಅದರಂತೆ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದರೆ ಕೃಷ್ಣಾ ನದಿಯ ಅಭಿವೃದ್ಧಿಗಾಹಿ ಪ್ರತಿ ವತ್ಷವೂ 40 ಸಾವಿರ ಕೋಟಿ ಹಣವನ್ನು ಮೀಸಲಿಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ್ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರಿಗೆ ಸಂಘರ್ಷ ಹಾಗೂ ಸವಾಲಿನ ಸಮಯ ಎದುರಾಗಿದೆ. ಬಿಜೆಪಿಯವರು ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ಜನರಿಗೆ ಮೋಸ ಮಾಡುತ್ತಾ ಬರುತ್ತಿದ್ದಾರೆ. ಇನ್ನು ಮೂರು ತಿಂಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಳಿಕ ಕೃಷ್ಣಾ ನದಿ ಅಭಿವೃದ್ಧಿಗೆ ಪ್ರತಿ ವರ್ಷ ಹಣ ತೆಗೆದಿಡಲಾಗುತ್ತದೆ ಎಂದಿದ್ದಾರೆ.
ಇಂದಿಗೂ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಕೃಷ್ಣಾ ಮತ್ತು ಮಹದಾಯಿ ನೀರಿನ ಹಕ್ಕಿನಿಂದ ಉತ್ತರ ಕರ್ನಾಟಕದ ಜನರನ್ನು ದೂರವಿಟ್ಟಿದ್ದಾರೆ. ಎಷ್ಟು ಬಾರಿ ರಾಜ್ಯಕ್ಕೆ ಬಂದರೂ ಅವರು ಮಹದಾಯಿ ಮತ್ತು ಕೃಷ್ಣ ನದಿ ನಿರೀನ ಬಗ್ಗೆ ಮಾತನಾಡಿಲ್ಲ. ಯಾಕಂದ್ರೆ ಅವರ ಮನಸ್ಸಲ್ಲಿ ಕಳ್ಳನಿದ್ದಾನೆ. ಅರಣ್ಯ ಇಲಾಖೆಯ ಕ್ಲಿಯರೆನ್ಸ್, ಹಸಿರು ನ್ಯಾಯಾಧೀಕರಣದ ಕ್ಲಿಯರೆನ್ಸ್, ಕಾಮಗಾರಿಯ ಟೆಂಡರ್ ಎಲ್ಲಿದೆ ಎಂಬುದನ್ನು ತೋರಿಸಲಿ ಎಂದಿದ್ದಾರೆ.