ಚೆನ್ನೈ: ಕಳೆದ ಎರಡು ದಿನದಿಂದ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ. ಮಾಂಡೌಸ್ ಚಂಡಮಾರುತದಿಂದಾಗಿ ಚೆನ್ನೈ, ತಮಿಳುನಾಡು, ಆಂಧ್ರದಾದ್ಯಂತ ಜೋರು ಮಳೆಯಿದೆ. ಕರ್ನಾಟಕದಲ್ಲೂ ಬೆಳಗ್ಗೆಯಿಂದ ಬೆಂಬಿಡದೆ ಮಳೆ ಸುರಿಯುತ್ತಲೆ ಇದೆ. ಒಂದು ಕಡೆ ಚಳಿ ಮತ್ತೊಂದು ಕಡೆ ಗಾಳಿ ಮಳೆಯಿಂದಾಗಿ ದಿನದ ಕೆಲಸ ಮಾಡುವುದಕ್ಕೂ ನಡುಗುತ್ತಿದ್ದಾರೆ.
ಇನ್ನು ಮಾಂಡೌಸ್ ಚಂಡಮಾರುತ ತಮಿಳುನಾಡಿನಲ್ಲಿ ನಾಲ್ವರನ್ನು ಬಲಿಪಡೆದುಕೊಂಡಿದೆ. ಗಂಟೆಗೆ 85 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತಿದೆ. ಈ ಚಂಡಮಾರುತದಿಂದ ತಮಿಳುನಾಡಿನಾದ್ಯಂತ ಬಾರೀ ನಷ್ಟವುಂಟಾಗಿದೆ. ಭೂಕುಸಿತ ಸೇರಿದಂತೆ 400ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಚೆನ್ನೈನ ಹಲವು ನಗರಗಳಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರಗಳು ಬಿದ್ದು ಹಾನಿಯಾಗಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.