396ನೇ ಶಿವಾಜಿ ಜಯಂತಿ : ಜನಪರ ಆಡಳಿತಗಾರ ಛತ್ರಪತಿ ಶಿವಾಜಿ : ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ

2 Min Read

 

ಚಿತ್ರದುರ್ಗ (ಫೆ..19) : ಕೃಷ್ಣದೇವರಾಯನ ತರುವಾಯ ಭಾರತದಲ್ಲಿ ಬೃಹತ್ ಹಿಂದು ಸಾಮ್ರಾಜ್ಯ ಕಟ್ಟಿದ ನಾಯಕ ಛತ್ರಪತಿ ಶಿವಾಜಿ. ಜನರ ಮೇಲೆ ಹೆಚ್ಚಿನ ಹೊರೆಯಾಗದಂತೆ, ತೆರಿಗೆ ಪದ್ದತಿ ಅಳವಡಿಸಿಕೊಂಡು ಜನಪರ ಆಡಳಿತ ನೆಡಿಸಿದ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ಹಾಗೂ ಜಿಲ್ಲಾ ಮರಾಠ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ, ನಗರದ ತ.ರಾ.ಸು ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ತಮ ಸೈನ್ಯ ಸಂಘಟನೆ, ದೇಶಪ್ರೇಮಿ ಹಾಗೂ‌ ಆಡಳಿತಗಾರನಾಗಿ‌‌ ಶಿವಾಜಿ‌ ರೂಪುಗೊಳ್ಳಲು ತಾಯಿ ಜಿಜಾಬಾಯಿ ಕಾರಣ.‌ ಚಿಕ್ಕದಿನಿಂದಲೇ ಮಹಾಭಾರತ ಹಾಗೂ ರಾಮಯಣ ಕಥೆಗಳನ್ನು ಶಿವಾಜಿಗೆ ಹೇಳಿವುದರ ಮೂಲಕ ದೇಶದ ಸಂಸ್ಕೃತಿಯನ್ನು ಪರಿಚಯ ಮಾಡಿಸಿದಳು. ತಾಯಿ‌ ಜಿಜಾಬಾಯಿ ಒತ್ತಾಸೆಯಂತೆ ಶಿವಾಜಿ ಮರಾಠ ಸಾಮ್ರಾಜ್ಯ ಸ್ಥಾಪನೆ ಮಾಡಿದ. ಶಿವಾಜಿ ಅನುಸರಿಸದ ಗೆರಿಲ್ಲಾ ಯುದ್ಧ ತಂತ್ರ ಜೊತೆಗೆ ಶಕ್ತಿ ಮತ್ತು ಯುಕ್ತಿಯಿಂದಾಗಿ ಸಾಮ್ರಾಜ್ಯ ವಿಸ್ತರಣೆಯಾಯಿತು. ಗೆರಿಲ್ಲಾ ಮಾದರಿ ಯುದ್ದ ತಂತ್ರವನ್ನು ಇಂದಿಗೂ ವಿಶ್ವದ ನಾನಾಕಡೆ ಬಳಸುವುದನ್ನು ನಾವು ಕಾಣಬಹುದು ಎಂದರು.

ಐ.ಎನ್.ಒ ರಾಜ್ಯ ಮುಖ್ಯ ಸಂಚಾಲಕ ಬಿ.ಎಸ್. ಮಂಜುನಾಥಸ್ವಾಮಿ ವಿಶೇಷ ಉಪನ್ಯಾಸ ನೀಡಿ, ಮೊಘಲ್ ಹಾಗೂ ಆದಿಲ್‌ಷಾಯಿಗಳಿಗೆ‌ ತಲೆ ಬಾಗದೇ ಶಿವಾಜಿ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡಿದ. ಆಡಳಿತದಲ್ಲಿ ಫರ್ಷಿಯನ್ ಭಾಷೆಯ ಬದಲು ಸಂಸ್ಕೃತ ಭಾಷೆ ಪ್ರಾತಿನಿಧ್ಯ ನೀಡಿದ.ಧಾರ್ಮಿಕ ಸುಧಾರಣೆ ಮಾಡಿದ. ಇಂದಿನ ಯುವಕರು‌‌ ಶಿವಾಜಿಯ ಧೈರ್ಯ ಸಾಹಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್ ರಾವ್ ಜಾದವ್, ಕಾರ್ಯದರ್ಶಿ ಗೋಪಾಲರಾವ್ ಜಾದವ್, ಜಿಜಾಮಾತ ಮಹಿಳಾ ಮಂಡಳಿ ಅಧ್ಯಕ್ಷೆ ಜಿ.ಉಷಾಬಾಯಿ, ಯುವ ಮುಖಂಡರಾದ ನಿತೀನ್ ಜಾಧವ್ , ರೋಹಿತ್ ಗಾಯಕವಾಡ್, ಕಿರಣ್ , ವಿನಯ್ ಜಾದವ್ ಸೇರಿದಂತೆ ಮರಾಠ ಸಮಾಜದ ಮುಖಂಡರು ಹಾಗೂ ಗಣ್ಯರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಸ್ವಾಗತಿಸಿದರು. ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ ಪಲ್ಲವಿ ಮತ್ತು ತಂಡದವರಿಂದ ಗೀತಗಾಯನ ಪ್ರಸ್ತುತಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಬುರಜನಹಟ್ಟಿಯ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಅಲಂಕೃತ ಟ್ಯಾಕ್ಟರ್‍ನಲ್ಲಿ ಛತ್ರಪತಿ ಶಿವಾಜಿ ಪುತ್ಥಳಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಗಾಂಧಿ ಸರ್ಕಲ್, ಎಸ್.ಬಿ.ಐ ಸರ್ಕಲ್, ಪ್ರವಾಸಿ ಮಂದಿರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತ.ರಾ.ಸು ರಂಗಮಂದಿರ ತಲುಪಿತು. ಡೊಳ್ಳು ಕುಣಿತ, ತಮಟೆ ಹಾಗೂ ನಂದಿ ಧ್ವಜ ಕುಣಿತ
ಸೇರಿದಂತೆ ಇತರೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

Share This Article
Leave a Comment

Leave a Reply

Your email address will not be published. Required fields are marked *