ಬೆಂಗಳೂರು: ಆರೋಗ್ಯ ಇಲಾಖೆ ಕಳೆದ 24 ಗಂಟೆಯಲ್ಲಿ ಕೊರೊನಾ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಅದರಲ್ಲಿ 382 ಜನಕ್ಕೆ ಹೊಸದಾಗಿ ಸೋಂಕು ಹರಡಿದೆ.

ಕಳೆದ 24 ಗಂಟೆಯಲ್ಲಿ 11383 ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್, 25032 RTPCR ಟೆಸ್ಟ್ ಸೇರಿದಂತೆ ಒಟ್ಟು 36415 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 382 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ 239 ಮಂದಿ ಪತ್ತೆಯಾಗಿದ್ದಾರೆ.

ಇನ್ನು ಕೊರೋನಾದಿಂದ ಒಟ್ಟು 689 ಜನ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 10 ಜನ ಸಾವನ್ನಪ್ಪಿದ್ದಾರೆ.

