ಸುದ್ದಿಒನ್ ವೆಬ್ ಡೆಸ್ಕ್

ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದ ನೊಂಗ್ಬುವಾ ಲ್ಯಾಂಫು ಪಟ್ಟಣದ ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ (ನರ್ಸರಿ) ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಮತ್ತು ಬಂದೂಕು ಧಾರಿ ಸ್ವತಃ ಗುಂಡ ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.

ಮೂಲಗಳ ಪ್ರಕಾರ, ಬಂದೂಕುಧಾರಿ ಮಾಜಿ ಪೊಲೀಸ್ ಅಧಿಕಾರಿ
34 ವರ್ಷ ವಯಸ್ಸಿನ ಮಾಜಿ ಅಧಿಕಾರಿಯನ್ನು ಜೂನ್‌ನಲ್ಲಿ ಮಾದಕವಸ್ತು ಸೇವನೆಗಾಗಿ ವಜಾಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಲಿಯಾದವರಲ್ಲಿ 24 ಮಕ್ಕಳು ಸೇರಿದಂತೆ ಕನಿಷ್ಠ 34 ಮಂದಿ ಸತ್ತಿದ್ದಾರೆ ಆದರೆ ವಿವರಗಳು ಇನ್ನೂ ತಿಳಿಯಬೇಕಿದೆ ಎಂದು ಉಪ ಪೊಲೀಸ್ ವಕ್ತಾರ ಅರ್ಚನ್ ಕ್ರೈಟಾಂಗ್ ತಿಳಿಸಿದರು. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
https://twitter.com/ThaiEnquirer/status/1577929950610731009?t=eETu2pHt6mxYRjdwnaPoRw&s=19
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸಂತ್ರಸ್ತರ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಸಾವಿನಿಂದ ಶೋಕಿಸುತ್ತಿರುವುದನ್ನು ಕಾಣಬಹುದು. ಕೆಲವರು ಗಾಯಗೊಂಡವರನ್ನು ಆಂಬ್ಯುಲೆನ್ಸ್‌ಗೆ ಕರೆದೊಯ್ಯುವುದನ್ನು ಕಾಣಬಹುದು.
ಶಂಕಿತ ಗುಂಡಿಗೆ ಬಲಿಯಾದವರಲ್ಲಿ 22 ಮಕ್ಕಳಿದ್ದರು. ಬಂದೂಕುಧಾರಿ ಊಟದ ಸಮಯದಲ್ಲಿ ಬಂದಾಗ ಸುಮಾರು 30 ಮಕ್ಕಳು ಕೇಂದ್ರದಲ್ಲಿದ್ದರು.ಎಂಟು ತಿಂಗಳ ಗರ್ಭಿಣಿಯಾಗಿದ್ದ ಶಿಕ್ಷಕಿ ಸೇರಿದಂತೆ ನಾಲ್ಕೈದು ಸಿಬ್ಬಂದಿಗೆ ವ್ಯಕ್ತಿ ಮೊದಲು ಗುಂಡು ಹಾರಿಸಿದ್ದಾನೆ. ಮೊದಲಿಗೆ ಇದು ಪಟಾಕಿ ಎಂದು ಜನರು ಭಾವಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ವೀಡಿಯೊಗಳು ಈಶಾನ್ಯ ಪ್ರಾಂತ್ಯದ ನೋಂಗ್ ಬುವಾ ಲ್ಯಾಂಫುವಿನ ಉತೈ ಸಾವನ್ ಪಟ್ಟಣದ ಮಧ್ಯಭಾಗದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಮಕ್ಕಳ ದೇಹಗಳನ್ನು ನೋಡಬಹುದಾಗಿದೆ.

