Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯಲ್ಲಿ 31.06 ಲಕ್ಷ ನಗದು, 8.16 ಲಕ್ಷ ಮೌಲ್ಯದ ಮದ್ಯ, ಮಾದಕಗಳ ವಶ  : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಏ.10) : ವಿಧಾನಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸಲಾಗಿದ್ದು ಈವರೆಗೆ ಜಿಲ್ಲೆಯಲ್ಲಿ ದಾಖಲೆ ರಹಿತ ರೂ.31.06 ಲಕ್ಷ ನಗದು, 7.86 ಲಕ್ಷ ರೂ. ಮೌಲ್ಯದ ಒಟ್ಟು 1956.22 ಲೀ. ಅಕ್ರಮ ಮದ್ಯ ಹಾಗೂ 30,500 ರೂ. ಅಂದಾಜು ಮೌಲ್ಯದ 1.267 ಕೆ.ಜಿ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸಲು ಜಿಲ್ಲೆಯಾದ್ಯಂತ 35 ಚೆಕ್‍ಪೋಸ್ಟ್‍ಗಳು ಕಾರ್ಯನಿರ್ವಹಿಸುತ್ತಿವೆ. ದಿನದ 24 ಗಂಟೆಯೂ ಚೆಕ್‍ಪೋಸ್ಟ್‍ಗಳಲ್ಲಿ ಅಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಸೋಮವಾರದಂದು ಖುದ್ದಾಗಿ ಹಿರಿಯೂರು ತಾಲ್ಲೂಕಿನ ಗುಯಿಲಾಳು ಚೆಕ್‍ಪೋಸ್ಟ್, ಪಿ.ಡಿ. ಕೋಟೆ ಚೆಕ್‍ಪೋಸ್ಟ್ ಸೇರಿದಂತೆ ವಿವಿಧೆಡೆ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ, ವಾಹನಗಳ ತಪಾಸಣೆ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಅಕ್ರಮವಾಗಿ ನಗದು ಸಾಗಾಣಿಕೆ, ಮದ್ಯ ಸಾಗಾಣಿಕೆ ಅಲ್ಲದೆ ಸೀರೆ, ಕುಕ್ಕರ್ ಸೇರಿದಂತೆ ವಿವಿಧ ಬಗೆಯ ಸಾಮಗ್ರಿಗಳ ಸಾಗಾಣಿಕೆ ಸಂಭವ ಹೆಚ್ಚಾಗಿರುತ್ತದೆ, ಚೆಕ್‍ಪೋಸ್ಟ್‍ಗಳಲ್ಲಿ ಈ ಬಗ್ಗೆ ದಿನದ 24 ಗಂಟೆಯೂ ತೀವ್ರ ನಿಗಾ ವಹಿಸಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ತಾಕೀತು ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಚೆಕ್‍ಪೋಸ್ಟ್ ಸಿಬ್ಬಂದಿಗಳಿಗೆ ಅಕ್ರಮ ತಡೆ ಕುರಿತಂತೆ ಸಲಹೆ ಸೂಚನೆಗಳನ್ನು ನೀಡಿದರು.

ರೂ.31,06,700 ನಗದು ವಶ: ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಿನ ನಿಗಾ ವಹಿಸಲು ರಚಿಸಲಾಗಿರುವ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು ಅಕ್ರಮ ತಡೆಗೆ ಕಾರ್ಯೋನ್ಮುಖರಾಗಿವೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ರೂ. 31,06,700 ನಗದು ವಶ ಪಡಿಸಿಕೊಳ್ಳಲಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ ರೂ. 11,02,700, ಹಿರಿಯೂರು ತಾಲ್ಲೂಕಿನಲ್ಲಿ ರೂ.17,84,000 ನಗದು ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ರೂ.2,20,000 ಸೇರಿದಂತೆ ಒಟ್ಟು ರೂ.31,06,700 ನಗದು ವಶ ಪಡಿಸಿಕೊಳ್ಳಲಾಗಿದೆ.

8.16 ಲಕ್ಷ ಮೌಲ್ಯದ ಮದ್ಯ, ಮಾದಕಗಳ ವಶ: ಜಿಲ್ಲೆಯಲ್ಲಿ ಈವರೆಗೆ ಒಟ್ಟು 8.16 ಲಕ್ಷ ಮೌಲ್ಯದ ಅಕ್ರಮ ಮದ್ಯ, ಮಾದಕಗಳ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 1,48,951.42 ರೂ. ಮೌಲ್ಯದ 382.090 ಲೀ. ಅಕ್ರಮ ಮದ್ಯ ಹಾಗೂ 15,000 ರೂ. ಮೌಲ್ಯದ 0.514 ಕೆ.ಜಿ. ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.  ಮೊಳಕಾಲ್ಮೂರು ತಾಲ್ಲೂಕಿನಲ್ಲಿ 1,02,792.93 ರೂ. ಮೌಲ್ಯದ 255.190 ಲೀ. ಮದ್ಯ,   ಚಿತ್ರದುರ್ಗ ತಾಲ್ಲೂಕಿನಲ್ಲಿ 1,14,046.81 ರೂ. ಮೌಲ್ಯದ 270.160 ಲೀ. ಮದ್ಯ ಹಾಗೂ 10,500 ರೂ. ಮೌಲ್ಯದ 0.541 ಕೆ.ಜಿ. ಮಾದಕ, ಹಿರಿಯೂರು ತಾಲ್ಲೂಕಿನಲ್ಲಿ 2,23,876.91 ರೂ. ಮೌಲ್ಯದ 569.520 ಲೀ. ಮದ್ಯ ಹಾಗೂ 5,000 ರೂ. ಮೌಲ್ಯದ 0.212 ಕೆ.ಜಿ. ಮಾದಕ,  ಹೊಸದುರ್ಗ ತಾಲ್ಲೂಕಿನಲ್ಲಿ 86,807 ರೂ. ಮೌಲ್ಯದ 211.140 ಲೀ. ಮದ್ಯ,  ಹೊಳಲ್ಕೆರೆ ತಾಲ್ಲೂಕಿನಲ್ಲಿ 1,09,526.96 ರೂ. ಮೌಲ್ಯದ 268.121 ಲೀ ಮದ್ಯ ವಶಪಡಿಸಿಕೊಂಡು, ಅಕ್ರಮ ಚಟುವಟಿಕೆ ನಡೆಸಿದವರ ವಿರುದ್ಧ ಕಾನೂನು ರೀತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

ಹೊಳಲ್ಕೆರೆ | ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಸುದ್ದಿಒನ್, ಹೊಳಲ್ಕೆರೆ, ಜುಲೈ. 26 : ನಮ್ಮ ರಾಷ್ಟ್ರಧ್ವಜವು ಗಾಳಿಯಿಂದ ಹಾರುತ್ತಿಲ್ಲ ಬದಲಾಗಿ ಅದು ಹಾರುತ್ತಿರುವುದು ಈ ದೇಶಕ್ಕಾಗಿ ಮಡಿದ ವೀರ ಯೋಧರ ಸೈನಿಕರ ಉಸಿರಿನಿಂದ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್. ವಸಂತ್ ಹೇಳಿದರು.

ಖ್ಯಾತ ನಿರೂಪಕಿ ದಿವ್ಯಾ ಆಲೂರು ತಂದೆ‌ ನಿಧನ : ತಾವೇ ಅಂತ್ಯಸಂಸ್ಕಾರ ಮಾಡಿ ಹೇಳಿದ್ದೇನು..?

ಬೆಂಗಳೂರು : ಪೋಷಕರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಈಗಲೂ ಮನಸ್ಥಿತಿ ಎಲ್ಲಾ ಕಡೆಯಲ್ಲೂ ಬದಲಾಗಿಲ್ಲ. ತಮಗೆ ಗಂಡು ಮಕ್ಕಳು ಇಲ್ಲದೆ ಇದ್ದರು, ಅಣ್ಣತಮ್ಮಂದಿರಿಗೆ ಇರುವ ಗಂಡು ಮಕ್ಕಳಿಂದಾನೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಸತ್ತವರಿಗೆ ಅಂತ್ಯ

error: Content is protected !!