ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ. 23 : ನಗರದ ಆನೆ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ (ರಿ) ವತಿಯಿಂದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ 30ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಳಸಾಭಿಷೇಕ ಅಂಗವಾಗಿ ಮಾ. 21 ರಿಂದ 23ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಮಾ.21ನೇ ಶುಕ್ರವಾರ ಸಂಜೆ ರಾಕ್ಷೋಘ್ನ ಹೋಮ, ವಾಸ್ತು ಹೋಮ, ದುರ್ಗಾ ದೀಪ ನಮಸ್ಕಾರ ಪೂಜೆ ಮಾ.22 ರ ಶನಿವಾರ ಬೆಳಿಗ್ಗೆ ನವಗ್ರಹ ಶಾಂತಿ, ಗಂಗಾ ಶಾಂತಿ, ನಾಗಶಾಂತಿ ಸಂಜೆ 5.30ಕ್ಕೆ ಅಧಿವಾಸದ ಹೋಮ, ಬ್ರಹ್ಮಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ, ನಂತರ ಕಳಸ ಸ್ಥಾಪನೆ ಮಾ. 23 ನೇ ಭಾನುವಾರ ಕಲಾವೃದ್ಧಿ ಹೋಮ, ಶಾಂತಿ ಪ್ರಾಯಶ್ಚಿತ್ತ, ಹೋಮಾದಿಗಳು ಬ್ರಹ್ಮ ಕಲಶಾಭಿಷೇಕ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ 1.00 ರಿಂದ ಪೂಜಾ ಸೇವಾಕರ್ತರು ಹಾಗೂ ಸಮಸ್ತ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಪೂಜಾ ಕಾರ್ಯಕ್ರಮ ನಡೆಸಲಾಗಿದ್ದು ಇದರಲ್ಲಿ ಸುಮಾರು 2000ಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸಿ ಸ್ವಾಮಿಯ ಪ್ರಸಾದವನ್ನು ಸ್ವೀಕಾರ ಮಾಡಿ ವಿನಾಯಕನ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ತಿಳಿಸಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿ.ಪಂ.ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್, ಶಾಸಕರ ಸಹೋದರಿ ಶ್ರೀಮತಿವೀಣಾ, ಡಾ.ಕೀರ್ತಿ ಮಲ್ಲಿಕಾರ್ಜನ್, ಡಾ.ಮುಕುಂದರಾವ್, ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಶ್ರೀನಿವಾಸ್, ಕೋ-ಆಪರೇಟಿವ್ ಸೂಸೈಟಿಯ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ, ಕನ್ನಿಕಾ ಪರಮೇಶ್ವರ ಬ್ಯಾಂಕ್‍ನ ಅಧ್ಯಕ್ಷರಾದ ಪ್ರಾಣೇಶ್, ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಗೋಪಾಲರಾವ್ ಜಾಧವ್ ಹಾಗೂ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

