ಬೆಳಗಾವಿ: ಔರಂಗಾಬಾದ್ ದೌಂಡ್ ಗ್ರಾಮದಲ್ಲಿ ಕರ್ನಾಟಕದ ಬಸ್ ಗಳಿಗೆ ಮಸಿ ಬಳಿದ ಹಿನ್ನೆಲೆ ಇದೀಗ ಮಹಾರಾಷ್ಟ್ರದಿಂದ ಬೆಳಗಾವಿಗೆ ತೆರಳಬೇಕಿದ್ದ 300 ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮಸಿ ಬಳಿದಂತೆ, ಬೆಳಗಾವಿಯಲ್ಲೂ ಅದೇ ರೀತಿ ಮಾಡಿದರೆ ಎಂಬ ಆತಂಕದಿಂದ ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಬೆಳಗಾವಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಇನ್ನು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿದ್ದು, ಮಹಾರಾಷ್ಟ್ರದ ಬಸ್ ಗಳ ಮೇಲೆ ಬರಹ ಬರೆಯದಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಎರಡೂ ರಾಜ್ಯಗಳ ನಡುವೆ ಸಂಚಾರಕ್ಕೆ ಏನು ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.
ಪ್ರತಿದಿನ ಪಕ್ಕದ ರಾಜ್ಯದಿಂದ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಬಸ್ ಗಳು ಬರುತ್ತಿದ್ದವು. ದೌಂಡ್ ಗ್ರಾಮದಲ್ಲಿ ಮರಾಠಿ ಪರವಾದ ಬರವಣಿಗೆಯನ್ನು ಕರ್ನಾಟಕದ ಬಸ್ ಗಳ ಮೇಲೆ ಬರೆಯಲಾಗಿತ್ತು. ಇದನ್ನು ಸಿಎಂ ಬೊಮ್ಮಾಯಿ ಅವರು ಕೂಡ ಖಂಡಿಸಿದ್ದರು.