ಸಿಎಂ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ 30 ಮಂದಿ ವಜಾ..!

suddionenews
1 Min Read

ಬೆಂಗಳೂರು; ಸಿಎಂ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ 30 ಮಂದಿಯನ್ನು ಇದ್ದಕ್ಕಿದ್ದ ಹಾಗೇ ವಜಾ ಮಾಡಲಾಗಿದೆ. ಇಂದಿನಿಂದ ಅಂದರೆ ಏಪ್ರಿಲ್ 1ರಿಂದಲೇ ಕೆಲಸದಿಂದ ವಜಾ‌ ಮಾಡಲಾಗಿದೆ. ಗುತ್ತಿಗೆ ಆಧಾರದ ಮೇಲೆ‌ ಕೆಲಸ ಮಾಡುತ್ತಿದ್ದವರನ್ನು ವಜಾ ಮಾಡಲಾಗಿದೆ. ಸಿಎಂ ಸಚಿವಾಲಯದಿಂದ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ.

ರಾಜ್ಯ ಸರ್ಕಾರದ ಸಹಾಯಕರು, ಕಿರಿಯ ಸಹಾಯಕರು, ದಲಾಯತ್ ಸೇರಿ ವಿವಿಧ ಹುದ್ದೆಯಲ್ಲಿದ್ದವರು ಸೇವೆಯಿಂದ ವಜಾಗೊಂಡಿದ್ದಾರೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ರಾಮನಗರ, ತುಮಕೂರು, ಬೆಳಗಾವಿ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು ವಜಾ ಮಾಡಲಾಗಿದೆ. ದಿಢೀರನೆ ಸಿಬ್ಬಂದಿಗಳನ್ನು ವಜಾ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಲವು ತಿಂಗಳುಗಳ ಹಿಂದೆಯೇ ಸರ್ಕಾರದ ಸಚಿವಾಲಯದಲ್ಲಿ ಅನಗತ್ಯವಾಗಿರುವ ಸಿಬ್ಬಂದಿಗಳನ್ನು ತೆಗೆದು ಹಾಕಲಾಗುವುದು ಎಂಬ ಮಾಹಿತಿ ಚರ್ಚೆಯಾಗಿತ್ತು.

ಕೆಲವರು ಕೆಲಸ ಇಲ್ಲದೆ ಇದ್ದರು ಕಚೇರಿಯಲ್ಲಿ ಕೂರುತ್ತಾ ಇದ್ದದ್ದು ಸರ್ಕಾರದ ಗಮನಕ್ಕೆ ಬಂದಿತ್ತು. ಸರ್ಕಾರಿ ಕಚೇರಿಯಲ್ಲಿ ಅನಗತ್ಯ ಸಿಬ್ಬಂದಿಯನ್ನು ಮನೆಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ. ಅಷ್ಟೇ ಅಲ್ಲ ಸರ್ಕಾರಿ ಕಚೇರಿಗಳಲ್ಲಿ ಕಟ್ಟು ನಿಟ್ಟಿನ ರೂಲ್ಸ್ ತರಲಾಗಿದೆ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತ ಮಹತ್ವದ ಕಡತಗಳು ಲೀಕ್ ಆಗುತ್ತಿದ್ದವು ಎಂಬ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ ಈ ಒಂದು ನಿರ್ಧಾರ ಕೈಗೊಂಡಿದ್ದು, ಆಡಳಿತ ಯಂತ್ರವನ್ನು ಬಿಗಿ ಮಾಡಲು ಯೋಚಿಸಿದೆ. ಮೂಡಾ ಕೇಸ್ ಬಂದ ನಂತರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದೀಗ ಇಂದಿನಿಂದಾನೇ ಸಿಬ್ಬಂದಿಗಳನ್ನು ವಜಾ ಮಾಡಿ ಸರ್ಕಾರವರೆ ಆದೇಶ ಹೊರಡಿಸಿದೆ. ಮೂವತ್ತು ಮಂದಿ ಇಂದಿನಿಂದ ಕೆಲಸಕ್ಕೆ ಹೋಗುವಂತೆ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *