ಬೆಂಗಳೂರು: ಕೊರೊನಾ ನಡುವೆ ಸದ್ಯ ಒಮಿಕ್ರಾನ್ ಭೀತಿ ಹೆಚ್ಚಾಗಿದೆ. ಕರ್ನಾಟಕದಲ್ಲೇ ಒಮಿಕ್ರಾನ್ ಪತ್ತೆಯಾಗಿ ಆತಂಕ ಮೂಡಿಸಿತ್ತು. ಇಬ್ಬರಲ್ಲಿ ಪತ್ತೆಯಾಗಿತ್ತು. ಇಂದು ಮತ್ತೆ ಒಬ್ಬರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲೇ ಇವತ್ತು ಒಂದು ಒಮಿಕ್ರಾನ್ ಪತ್ತೆಯಾಗಿದ್ದು, ಸೋಂಕಿತರು ಬೊಮ್ಮನಹಳ್ಳಿಯ ಅಂಜನಾಪುರ ನಿವಾಸಿಯಾಗಿದ್ದಾರೆ. ಈ ವ್ಯಕ್ತಿ ಡಿಸೆಂಬರ್ 1ರಂದು ದಕ್ಷಿಣಾ ಆಫ್ರಿಕಾದಿಂದ ಬಂದಿದ್ದರಂತೆ. ಏರ್ಪೋರ್ಟ್ ನಲ್ಲಿಯೇ ಟೆಸ್ಟ್ ಮಾಡುದ್ದಾಗ ನೆಗೆಟಿವ್ ಬಂದಿದೆ. ಆದರೂ ಹೋಂ ಐಸೋಲೇಷನ್ ನಲ್ಲಿದ್ದ ಈತನಿಗೆ ಮತ್ತೆ ಪರೀಕ್ಷೆ ಮಾಡಲಾಗಿದೆ. ಆಗ ಪಾಸಿಟಿವ್ ಬಂದಿದೆ. ಹೀಗಾಗಿ ಲ್ಯಾಬ್ ಗೆ ಕಳುಹಿಸಿ ಟೆಸ್ಟ್ ಮಾಡಿದಾಗ ಒಮಿಕ್ರಾನ್ ದೃಢವಾಗಿದೆ.
ಆತನನ್ನ ಚಿಕಿತ್ಸೆಗೆ ಒಳಪಡಿಸಲಾಗಿದೆ. ಜೊತೆಗೆ ಆತನ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲರನ್ನು ಹೋಂ ಐಸೋಲೇಷನ್ ನಲ್ಲಿಡಲಾಗಿದೆ.