ಬೆಂಗಳೂರು: ಬೆಳಗ್ಗೆಯಿಂದ ಜೋರು ಬಿಸಿಲನ್ನು ನೋಡಿದ್ದ ಬೆಂಗಳೂರು ಮಂದಿ ಮಧ್ಯಾಹ್ನದ ವೇಳೆ ಜೋರು ಮಳೆಯ ಸ್ಪರ್ಶ ಮಾಡಿದ್ದಾರೆ. ಹವಮಾನ ಇಲಾಖೆಯ ವರದಿ ಪ್ರಕಾರ ರಾಜ್ಯದಲ್ಲಿ ಇನ್ನು ಮೂರು ದಿನಗಳ ಕಾಲ ಮಳೆಯಾಗಲಿದೆ.
ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಮನೆ ಮಾಡಿದೆ. ಕರಾವಳಿಯ ದಕ್ಷಿಣ ಒಳನಾಡು, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತ, ಬಳ್ಳಾರಿ ಚಿತ್ರದುರ್ಗ, ಕೋಲಾರ, ಮೈಸೂರು, ಕೊಡಗು, ಚಾಮರಾಜನಗರ, ತುಮಕೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಬೆಳಗ್ಗೆಯಿಂದಾನೂ ವಾತಾವರಣದಲ್ಲಿ ಬದಲಾವಣೆ ಕಾಣಿಸುತ್ತಿದ್ದು, ಇನ್ನು ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯರಾಯನ ದರ್ಶನವಾಗಲಿದೆ. ರೈತನಿಗೆ ಮಳೆಯಿಂದಾಗಿ ಮೊಗದಲ್ಲಿ ಸಂತಸವೂ ಮೂಡಿದೆ. ಬೆಳೆ ಬೆಳೆಯಲು ತಯಾರಿಯಲ್ಲಿ ತೊಡಗಿಕೊಂಡಿದ್ದಾನೆ.





GIPHY App Key not set. Please check settings