ಸವದತ್ತಿ ಯಲ್ಲಮ್ಮನ ಗುಡಿಯಲ್ಲಿ 4 ದಿನಕ್ಕೆ 3 ಕೋಟಿ ಸಂಗ್ರಹ

1 Min Read

ಬೆಳಗಾವಿ: ಯಲ್ಲಮ್ಮ ದೇವಿಗೆ ಭಕ್ತರ ಸಂಖ್ಯೆ ಅಪಾರ. ಸದಾ ಸಾವಿರಾರು ಸಂಖ್ಯೆಯಲ್ಲಿ ದರ್ಶನಕ್ಕಂದು ಹೋಗ್ತಾರೆ. ಅದರಲ್ಲೂ ಹುಣ್ಣಿಮೆಯಂದು ಭಕ್ತರ ಸಂಖ್ಯೆ ಇನ್ನು ಹೆಚ್ಚಾಗಿರುತ್ತದೆ. ತಾಯಿ ದರ್ಶನ್ ಪಡೆದು ಕೈಲಾದ ಕಾಣಿಕೆಯನ್ನ ಅರ್ಪಿಸಿ ಬರ್ತಾರೆ. ಇನ್ನು ಹಲವರು ಏನಾದರೂ ಬೇಡಿಕೊಂಡ ಕೆಲಸಗಳು ನೆರವೇರಿದರೆ ಹಣ, ಚಿನ್ನ, ಬೆಳ್ಳಿ ರೂಪದಲ್ಲಿ ಕಾಣಿಕೆಯನ್ನ ಅರ್ಪಿಸುತ್ತಾರೆ. ಹಾಗೇ ಭಕ್ತರಿಂದ ಯಲ್ಲಮ್ಮನಿಗೆ ಬಂದ ಕಾಣಿಕೆ ಕೋಟಿ ಲೆಕ್ಕದಲ್ಲಿ ಇದೆ.

ಇಂದು ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ ನಾಲ್ಕು ದಿನದಲ್ಲಿ ಮೂರು ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಎಣಿಕೆ ಕಾರ್ಯ ನಡೆಸಿದ್ದು, 3.07 ಕೋಟಿ ಸಂಗ್ರಹವಾಗಿದೆ. ಮಾರ್ಚ್ 9 ರಿಂದ ಮಾರ್ಚ್ 12ರ ಅವಧಿಯಲ್ಲಿ ಸತತವಾಗಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಕಳೆದ ವಾರವೂ ಹುಂಡಿ ಎಣಿಕೆ ನಡೆದಿತ್ತು, ಆದರೆ ಈ ವಾರದ ಎಣಿಕೆಯಲ್ಲಿ ದಾಖಲೆ ಮಟ್ಟದ ಕಾಣಿಕೆ ಬಂದಿರುವುದು ವಿಶೇಷ. ದೇವಸ್ಥಾನದ ಸಿಬ್ಬಂದಿಯೊಂದಿಗೆ ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪಾರದರ್ಶಕವಾಗಿ ಎಣಿಕೆ ಪ್ರಕ್ರಿಯೆ ನಡೆಸಲಾಗಿದೆ.

 

ಇದರಲ್ಲಿ 2,78,49,000 ಕೋಟಿ ರೂಪಾಯಿ ಹಣ, 100 ಗ್ರಾಂ ತೂಕದ ಚಿನ್ನಾಭರಣ, 4 ಕೆಜಿ 547 ಗ್ರಾಂ ತೂಕದ ಬೆಳ್ಳಿ ಆಭರಣವನ್ನು ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಸದ್ಯ ಸಂಗ್ರಹವಾದ ಹಣವನ್ನು ದೇವಸ್ಥಾನದ ಅಭಿವೃದ್ಧಿಗಾಗಿ ಬಳಸಲಾಗುತ್ತದೆ. ಹಾಗೇ ಪ್ರತಿ ವರ್ಷ ನಡೆಯುವ ಜಾತ್ರೆಗೂ ಬಳಕೆ ಮಾಡಿಕೊಳ್ಳಲಾಗುತ್ತದೆ.

Share This Article