ಬೆಂಗಳೂರು : ನಿನ್ನೆಯಿಂದ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಗ್ಯಾರಂಟಿಗಳ ಜಾರಿಗೆ ಆಗ್ರಹಿಸಿ ಇಂದು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಡಿಸಿಎಂ ಶಿವಕುಮಾರ್, ಅವರ ಪ್ರತಿಭಟನೆಗೆ ಶುಭವಾಗಲಿ ಎಂದಿದ್ದಾರೆ.
ಬಿಜೆಪಿಯವರು ಸದನದ ಒಳಗೆ, ಹೊರಗೆ ಪ್ರತಿಭಟನೆ ಮಾಡಲಿ. ಪ್ರತಿಭಟನೆಗೆ ಮುಂದಾಗಿರುವ ಅವರಿಗೆ ಒಳ್ಳೆಯದಾಗಲಿ. ಎರಡು ಕಡೆ ಪ್ರತಿಭಟನೆ ನಡೆಸೋದು ಒಳ್ಳೆಯದು. ಅವರ ಆಚಾರ ವಿಚಾರವನ್ನು ಅವರೇ ಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಏನು ಗ್ಯಾರಂಟಿ ಕೊಟ್ಟಿದೆ, ಅದನ್ನು ಕಂಡಿಶನ್ಯಿಲ್ಲದೇ ತರಬೇಕು, ಗೋ ಹತ್ಯೆ ಕಾಯಿದೆ ಬದಲಾವಣೆ ಮಾಡಬಾರದು, ಈ ಕುರಿತಾಗಿ ಇಂದು ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.