ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಪೀಠಾರೋಹಣದ 2 ನೇ ವಾರ್ಷಿಕೋತ್ಸವ : ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ರಕ್ತದಾನ ಶಿಬಿರ

1 Min Read

ಸುದ್ದಿಒನ್, ಚಿತ್ರದುರ್ಗ, (ಜು.15) : ರಕ್ತದಾನ ಮಹಾದಾನ ಇಂತಹ ಪುಣ್ಯದ ಕೆಲಸದಲ್ಲಿ ನೀವು ಭಾಗಿಗಳಾಗಿದ್ದೀರಾ ಪರಮಾತ್ಮ ನಿಮಗೆ ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಹಾಗೂ ಒಂದು ಜೀವ ಉಳಿಸಿದ ಪುಣ್ಯ ನಿಮ್ಮದಾಗುತ್ತದೆ ಎಂದು ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.

ಅವರು ನಗರದ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ವಾಸವಿ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರ ಎರಡನೇ ವರ್ಷದ ಪೀಠಾರೋಹಣದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಇಂಥ ಒಳ್ಳೆ ಕಾರ್ಯಗಳನ್ನು ಮಾಡಿ ಜನಾನುರಾಗಿಗಳಾಗಿ ಹಾಗೂ ಜನರಿಗೆ ಅನುಕೂಲವಾಗುವ ಮತ್ತಷ್ಟು ಕಾರ್ಯಗಳನ್ನ ನೀಡಿ ಎಂದು ಹೇಳಿದರು. ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ವಾಸವಿ ರಕ್ತ ನಿಧಿ ಕೇಂದ್ರ ಕಾರ್ಯಕಾರಿ ಸಮಿತಿಯವರ ಕಾರ್ಯವನ್ನು ಶ್ಲಾಘಿಸಿದರು.

ಈ ರಕ್ತದನ ಶಿಬಿರದಲ್ಲಿ 21 ಜನ ಸ್ವಯಂಪ್ರೇರಿತವಾಗಿ ರಕ್ತದಾನವನ್ನು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸವಿ ಕ್ಲಬ್ ಅಧ್ಯಕ್ಷರಾದ ಎ.ಆರ್.ಲಕ್ಷ್ಮಣ್ ನಡೆಸಿಕೊಟ್ಟರು. ಹಾಗೂ ಕಾರ್ಯದರ್ಶಿ ಕೋಟೇಶ್ವರ ಗುಪ್ತ, ಖಜಾಂಚಿ ವೇಣುಗೋಪಾಲ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸತ್ಯನಾರಾಯಣ, ಮಂಜುನಾಥ್, ಸುಹಾಸ್, ಕಲ್ಪನಾ ಪಾಲ ಸಂತೋಷ್ ಹಾಗೂ ಆರ್ಯವೈಶ್ಯ ಕುಲಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.

ವಾಸವಿ ರಕ್ತ ನಿಧಿ ಕೇಂದ್ರದ ಡಾ. ಶ್ರೀನಿವಾಸ್ ಶೆಟ್ಟಿ ಹಾಗೂ ಶ್ರೀಮತಿ ಉಷಾ ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks