ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
![](https://suddione.com/content/uploads/2024/10/gifmaker_me-5-1.gif)
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 11 : ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.13 ರಿಂದ 15 ರವರೆಗೆ ನಡೆಯುವ ಸಂತ ಸೇವಾಲಾಲರ 286 ನೇ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.
ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ರಾಘವೇಂದ್ರನಾಯ್ಕ ಹದಿನಾಲ್ಕರಂದು ಮಧ್ಯಾಹ್ನ 2-30 ಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತ ಸೇವಾಲಾಲರ 286 ನೇ ಜಯಂತಿಯನ್ನು ಉದ್ಗಾಟಿಸುವರು. ಬಂಜಾರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಹನುಮಂತನಾಯ್ಕ, ಲಿಂಗಾನಾಯ್ಕ, ಅನಂತಮೂರ್ತಿನಾಯ್ಕ, ರಮೇಶ್‍ನಾಯ್ಕ, ಕುಮಾರ, ನರೇನಹಳ್ಳಿ ಅರುಣ್‍ಕುಮಾರ್, ತಿಪ್ಪೇಶಿ, ಹೆಚ್.ಲಕ್ಷ್ಮಣ್ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
![](https://suddione.com/content/uploads/2025/01/studio-11.webp)
![](https://suddione.com/content/uploads/2025/02/site.webp)