ಮೊರಾಕೋದಲ್ಲಿ ಪ್ರಬಲ ಭೂಕಂಪದಿಂದ ಜನ ನಲುಗಿ ಹೋಗಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಶುಕ್ರವಾರ ಕೂಡ ಭೂಕಂಪ ಸಂಭವಿಸಿದೆ. ಈ ಮೂಲಕ ಸಾವಿನ ಸಂಖ್ಯೆ 2,862ಕ್ಕೆ ಏರಕೆಯಾಗಿದೆ. ಭೂಕಂಪದಿಂದ ಗಾಯಗೊಂಡವರ ಸಂಖ್ಯೆ ಕೂಡ ಜಾಸ್ತಿಯಾಗಿದೆ.
ಭೂಕಂಪದಿಂದ ಅಲ್ಲಿನ ರಕ್ಷಣಾ ಸಿಬ್ಬಂದಿಗಳು ರಕ್ಷಣೆ ಮಾಡುವುದರಲ್ಲಿ ತೊಡಗಿದ್ದಾರೆ. ಆದರೆ ಕೆಲವೊಂದು ಭಾಗಗಳಿಗೆ ಹೋಗದೆ ಇರುವುದಕ್ಕೆ ಸಾಧ್ಯವಾಗದೆ, ಕಾಣೆಯಾದವರು ಎಷ್ಟು ಎಂಬ ಅಂದಾಜು ರಕ್ಷಣಾ ಸಿಬ್ಬಂದಿಗಳಿಗೂ ಸಿಗುತ್ತಿಲ್ಲ. ಆದ್ರೆ ಗಾಯಗೊಂಡವರ ಸಂಖ್ಯೆ 2,562 ಆಗಿದೆ. ಇನ್ನು ಕೂಡ ಸಾವು ನೋವು ಮುಂದುವರೆದಿದೆ.
ಭೂಕಂಪದಿಂದಾಗಿ ಮನೆಗಳು, ದೊಡ್ಡ ದೊಡ್ಡ ಕಟ್ಟಡಗಳು, ಅಪಾರ್ಟ್ಮೆಂಟ್ ಗಳು ನೆಲ ಸಮವಾಗಿವೆ. ಕಟ್ಟಡದ ಅಡಿಯಲ್ಲಿ ಅನೇಕ ಜನ ಸಿಲುಕಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಡು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ತಡರಾತ್ರಿ ಮೊರಾಕೋದಲ್ಲಿ ಭೂಕಂಪನವಾಗಿದ್ದು, ನೈರುತ್ಯಕ್ಕೆ 71 ಕಿಲೋಮೀಟರ್ ವೇಗದಲ್ಲಿ 18.5 ಕಿಲೋ ಮೀಟರ್ ಆಳದಲ್ಲಿ ಭೂಕಂಪನವಾಗಿದೆ.